ಗೋಣಿಕೊಪ್ಪಲು, ಜೂ. 29: ಗೋಣಿಕೊಪ್ಪಲುವಿನ ಕೆ.ಇ.ಬಿ. ಹಿಂಭಾಗದ (ಮೊದಲ ಅಡ್ಡ ರಸ್ತೆ) ಪತ್ನಿ ಮನೆಗೆ ಹುಂಡಿ ಹೊಲಮಾಳದ ಕೊರೊನಾ ಸೋಂಕಿನ ವ್ಯಕ್ತಿ ಕಳೆದ ಮೂರು ದಿನಗಳ ಹಿಂದೆ ಆಗಮಿಸಿ ತನ್ನ ಪತ್ನಿ ಮಕ್ಕಳೊಂದಿಗೆ ತಂಗಿದ್ದು ತದಾ ನಂತರದಲ್ಲಿ ಮಡಿಕೇರಿಯ ಕೋವಿಡ್ ಘಟಕಕ್ಕೆ ತಪಾಸಣೆಗೆ ತೆರಳಿ ದಾಖಲಾಗಿದ ಘಟನೆ ನಡೆದಿದೆ.
ವೀರಾಜಪೇಟೆ ತಾಲೂಕು ಚೆನ್ನಯ್ಯನಕೋಟೆ ಗ್ರಾಮದ ಹೊಲಮಾಳ ಪ್ರದೇಶದ ಇಬ್ಬರು ನಿವಾಸಿಗಳು ಬೆಂಗಳೂರಿನಿಂದ ಜಿಲ್ಲೆಗೆ ಹಿಂದಿರುಗಿದ್ದರು.ಇಬ್ಬರು ವ್ಯಕ್ತಿಗಳಲ್ಲಿ ಓರ್ವ ವ್ಯಕ್ತಿಗೆ ತಪಾಸಣೆಗೆ ತೆರಳಿದ ಸಂದರ್ಭ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ನಂತರ ಬೆಂಗಳೂರಿನನಿಂದ ಜೊತೆಯಲ್ಲಿ ಬಂದ ವ್ಯಕ್ತಿ ಯ ಬಗ್ಗೆ ಮಾಹಿತಿ ಕಲೆಹಾಕಿದ ಸಂದರ್ಭ 37 ವರ್ಷದ ವ್ಯಕ್ತಿ ಗೋಣಿಕೊಪ್ಪಲುವಿನ ಕೆ.ಇ.ಬಿ. ಹಿಂಭಾಗದಲ್ಲಿರುವ ತನ್ನ ಪತ್ನಿ ಮನೆಗೆ ಬಂದು ಮೂರು ದಿನ ತಂಗಿದ್ದ ಎನ್ನಲಾಗಿದೆ. ಮೊದಲನೆಯ ವ್ಯಕ್ತಿ ಮಾಹಿತಿ ಮೇರೆ ಗೋಣಿಕೊಪ್ಪಲುವಿಗೆ ಬಂದಿದ್ದ ವ್ಯಕ್ತಿಯನ್ನು ಪರೀಕ್ಷೆ ಮಾಡಿದ ಸಂದರ್ಭದಲ್ಲಿ ಆತನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ಮಾಹಿತಿ ಮೇರೆ ಅಧಿಕಾರಿಗಳು ವೈದ್ಯರು,ಹಾಗೂ ಪೆÇೀಲಿಸರು ಆಗಮಿಸಿ ಪರಿಶೀಲನೆ ನಡೆಸಿದರು.
ಈ ಘಟನೆಯ ಹಿನ್ನೆಲೆಯಲ್ಲಿ ಗೋಣಿಕೊಪ್ಪಲುವಿನ ಕೆ.ಇ.ಬಿ. ಹಿಂಬದಿಯ ಮೂವತ್ತು ಮನೆಗಳನ್ನು ಸೀಲ್ ಡೌನ್ ಮಾಡಿದ್ದಾರೆ.ಸೋಂಕು ದೃಢಪಟ್ಟ ಹಿನ್ನೆಲೆ ಸೋಂಕಿತನ ಪತ್ನಿ ಮನೆಯ ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯ ಆಗಿ ಪರಿವರ್ತಿಸಲಾಗಿದೆ.
ಪತ್ನಿಯ ಮನೆಯಲ್ಲಿ ಪುಟ್ಟ ಮಗು ಸೇರಿದಂತೆ 8 ಮಂದಿ ವಾಸವಿದ್ದರು ಎಂಬ ಮಾಹಿತಿ ಸ್ಥಳಕ್ಕೆ ಆಗಮಿಸಿದ ತಾಲೂಕು ತಹಶಿಲ್ದಾರ್ ನಂದೀಶ್ ಕುಮಾರ್ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಆರ್.ಐ. ರಾಧಾಕೃಷ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತೀರಾಜ್, ಗೋಣಿಕೊಪ್ಪ ಗ್ರಾ.ಪಂ. ಪಿಡಿಒ ಶ್ರೀನಿವಾಸ್, ಎಸ್.ಐ. ಸುರೇಶ್ ಬೋಪಣ್ಣ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಾದ ಮಂಜುನಾಥ್, ಯಶವಂತ್, ಸುಚಿತ್ರ, ಸಹಾಯಕರಾದ ಸುನೀಲ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಸತೀಶ್, ನವೀನ್ ಕುಮಾರ್, ಸುಬ್ರಮಣ್ಯ ಮುಂತಾದವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಅಗತ್ಯ ಕ್ರಮಕೈಗೊಂಡಿ ದ್ದಾರೆ. ಸ್ಥಳಿಯ ಗ್ರಾ.ಪಂ. ಸದಸ್ಯರು, ನಗರದ ಪ್ರಮುಖರಾದ ಹಕೀಮ್ ಹಾಜರಿದ್ದರು.