ಮಡಿಕೇರಿ, ಜೂ. 29: ಪತ್ರಕರ್ತ ಅನಿಲ್ ಎಚ್.ಟಿ. ಅವರ ಮೊದಲ ಕೃತಿ ಲಾಕ್ ಡೌನ್ ಡೈರಿ ತಾ. 30 ರಂದು (ಇಂದು) ಬೆಳಿಗ್ಗೆ 9 ಗಂಟೆಗೆ ಮಡಿಕೇರಿ ವಿಜಯ ವಿನಾಯಕ ದೇವಾಲಯದಲ್ಲಿ ಲೋಕಾರ್ಪಣೆ ಆಗಲಿದೆ.
ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮತ್ತು ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಕೂರ್ಗ್ ಫ್ಲೇವರ್ಸ್ ಕಾಮ್ನ ಬಾಲಾಜಿ ಕಾಶ್ಯಪ್ ಆನ್ ಲೈನ್ ಬುಕ್ಕಿಂಗ್ಗೆ ಚಾಲನೆ ನೀಡಲಿದ್ದಾರೆ.