ಚೆಟ್ಟಳ್ಳಿ, ಜೂ, 29: ಎಸ್.ಕೆ.ಎಸ್.ಎಸ್.ಎಫ್.ಜಿ.ಸಿ.ಸಿ ಕೊಡಗು ಘಟಕದ ವತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಗಲ್ಫ್ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ “ಮರಳಿ ಗೂಡಿಗೆ ಸಾಂತ್ವನ” ಎಂಬ ವಿಶೇಷÀ ಕಾರ್ಯಕ್ರಮ ಯು.ಎ.ಇ ಯಿಂದ ಆರಂಭಗೊಂಡು ಇದೀಗ ಸೌದಿ ಅರೇಬಿಯಾದವರೆಗೂ ವಿಸ್ತರಣೆ ಮಾಡಿದ್ದೇವೆ ಎಂದು ಕೊಡಗು ಜಿಸಿಸಿ ಘಟಕದ ಅಧ್ಯಕ್ಷ ಹುಸೈನ್ ಫೈಝಿ ತಿಳಿಸಿದ್ದಾರೆ.
ಸೌದಿ ಅರೇಬಿಯಾದ ರಿಯಾದ್ ನಿಂದ ಮಂಗಳೂರಿಗೆ ಸದ್ಯದಲ್ಲೇ ವಿಮಾನ ಪ್ರಯಾಣ ಸೌಲಭ್ಯ ಕಲ್ಪಿಸಲಿದ್ದು ತೆರಳಲು ಇಚ್ಚಿಸುವವರು ತಮ್ಮ ಅಧಿಕೃತ ದಾಖಲಾತಿಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಕರ್ನಾಟಕ ರಾಜ್ಯದವರಿಗೆ ಮೊದಲ ಆದ್ಯತೆ ನೀಡಲಾಗುವುದೆಂದು ಹುಸೈನ್ ಫೈಝಿ ಮಾಹಿತಿ ನೀಡಿದ್ದಾರೆ. ಸೌದಿ ಅರೇಬಿಯಾದ ರಿಯಾದ್ನಿಂದ ಮಂಗಳೂರಿಗೆ ತೆರಳಲು ಇಚ್ಚಿಸುವವರು ಸರ್ಕಾರದ ನಿಯಮದಂತೆ ಕ್ವಾರಂಟೈನ್ ವ್ಯವಸ್ಥೆಗೆ ಬದ್ದರಾಗಿರಬೇಕು. ಭಾರತೀಯ ರಾಯಬಾರಿ ಕಚೇರಿಯ ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ ಮಾಡಿದವರನ್ನು ಮಾತ್ರ ಪರಿಗಣನೆ ಮಾಡಲಾಗುವುದು ಎಂದು ಜಿ.ಸಿ.ಸಿ. ಕೊಡಗು ಘಟಕದ ಹುಸೈನ್ ಫೈಝಿ ತಿಳಿಸಿದ್ದಾರೆ.