ಕೂಡಿಗೆ, ಜೂ. 29: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ತೋಟಗಾರಿಕೆ ಕ್ಷೇತ್ರದಲ್ಲಿ ಬೆಳೆಸಲಾದ ತೆಂಗಿನ ಗಿಡಗಳನ್ನು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ರೈತರಿಗೆ ವಿತರಣೆ ಮಾಡಿದರು.
ರೈತರಿಗೆ ಅವರ ಜಮೀನಿನ ದಾಖಲೆಯ ಅನುಗುಣವಾಗಿ ಒಂದು ಎಕರೆ ಪ್ರದೇಶದಕ್ಕೆ 60 ಗಿಡಗಳನ್ನು ಸರಕಾರ ನಿಗದಿ ಮಾಡಿರುವ ಬೆಲೆ 60 ರೂ. ನಂತೆ ವಿತರಣೆ ಮಾಡಲಾಗುತ್ತದೆ ಎಂದು ತಾಲೂಕು ತೋಟಗಾರಿಕ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಸ್. ಶೋಭ ತಿಳಿಸಿದ್ದಾರೆ.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಗಣೇಶ, ತೋಟಗಾರಿಕೆ ಸಹಾಯಕ ಅಧಿಕಾರಿ ಕಾವ್ಯ, ಕೂಡಿಗೆ ತೋಟಗಾರಿಕೆ ಕ್ಷೇತ್ರದ ಅಧಿಕಾರಿ ಆನಂದ್ ಸೇರಿದಂತೆ ಹಲವು ರೈತರು ಇದ್ದರು.