ಕೂಡಿಗೆ, ಜೂ. 29. ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು - ಚಿಕ್ಕತ್ತೂರು ಮಾರ್ಗವಾಗಿ ಹಾರಂಗಿಗೆ ಹೋಗುವ ಸಮೀಪದ ರಸ್ತೆಯ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ.

ಈ ರಸ್ತೆಯ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿ ಪೂಜೆಯನ್ನು ಕಳೆದ 5 ತಿಂಗಳ ಹಿಂದೆ ನೆರವೇರಿಸಿದ್ದರು. ರೂ. 60 ಲಕ್ಷ ವೆಚ್ಚದ ಕಾಮಗಾರಿಯು ಜಿಲ್ಲೆಯ ವಿಶೇಷ ಅನುದಾನದ ಹಣವಾಗಿದ್ದು, ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ನಡೆಯುತ್ತಿದೆ.