ಕೂಡಿಗೆ, ಜೂ. 29: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಗೆ ತೆರಳುವ ರಸ್ತೆಯ ಸಮೀಪದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ 20 ಲಕ್ಷ ರೂ. ವೆಚ್ಚದ ಕಸ ವಿಲೇವಾರಿ ಘಟಕವನ್ನು ಜಿಲ್ಲಾ ಪಂಚಾಯತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಂಜುಳಾ ಉದ್ಘಾಟಿಸಿದರು. ಈ ಸಂದರ್ಭ ಗ್ರಾಮ ಪಂಚಾಯತಿ ಹಿರಿಯ ಸದಸ್ಯರುಗಳಾದ ಶಿವಾನಂದ, ಹರೀಶ್, ಜಗದೀಶ್ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತನಾಡಿ ಜಿಲ್ಲಾ ಪಂಚಾಯತಿ ಅನುದಾನ 20 ಲಕ್ಷದಲ್ಲಿ ಹತ್ತು ಲಕ್ಷ ಕಸ ವಿಲೇವಾರಿ ಘಟಕ, ಉಳಿದ ಹಣದಲ್ಲಿ ಕಸ ಸಾಗಾಟಕ್ಕೆ ವಾಹನ ಖರೀದಿ ಮಾಡಲಾಗುವುದು ಎಂದರು. ವಾಹನ ಬಂದಾಗ ಕಸವನ್ನು ಹಾಕಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಭವ್ಯ ವಹಿಸಿದ್ದರು. ಘಟಕ ಲೋಕಾರ್ಪಣೆ ಜ್ಞಾಪಕಾರ್ಥ ಪಂಚಾಯಿತಿ ಆಡಳಿತ ಮಂಡಳಿ ಪದಾಧಿಕಾರಿಗಳು ಘಟಕದ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಗ್ರಾಮ ಪಂಚಾಯತಿ ಸದಸ್ಯರುಗಳಾದ. ಎಂ.ಸಿ. ಸಂತೋಷ್, ಗಣೇಶ್, ರುದ್ರಾಂಭೆ, ಸುಚಿತ್ರ, ಜ್ಯೋತಿ, ವೇದಾವತಿ, ವಿಶ್ವನಾಥ್, ಕಮಲ, ಜಯಲಕ್ಷ್ಮಿ, ಪಾರ್ವತಿ ಸೇರಿದಂತೆ ಎಲ್ಲಾ ಸದಸ್ಯರುಗಳು, ತಾ.ಪಂ. ಸದಸ್ಯೆ ಪುಷ್ಪಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.