*ಸಿದ್ದಾಪುರ, ಜೂ. 29: ಇಲ್ಲಿಯವರೆಗೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಕಾಡಾನೆಗಳು ಈಗ ಮನೆಯಂಗಳಕ್ಕೆ ಬರಲು ಆರಂಭಿಸಿವೆ. ನೆಲ್ಯಹುದಿಕೇರಿಯ ಚೇಂದಂಡ ಮಾಚಮ್ಮ ಅವರ ಪುತ್ರ ಪೊನ್ನಪ್ಪ ಅವರ ಮನೆ ಬಾಗಿಲಿಗೆ ಬಂದ ಆನೆಗಳು ಹೂಕುಂಡಗಳನ್ನು ಪುಡಿಗಟ್ಟಿವೆ. ತೆಂಗಿನ ಮರಗಳಿಗೆ ಕೂಡ ಹಾನಿಯುಂಟು ಮಾಡುವುದರೊಂದಿಗೆ ಮನೆಯವರಲ್ಲಿ ಆತಂಕ ಮೂಡಿಸಿವೆ. ಸ್ಥಳಕ್ಕೆ ವನಪಾಲಕ ಕೂಡಕಂಡಿ ಸುಬ್ರಾಯ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರು ಭಯಗೊಂಡು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. -ಅಂಚೆಮನೆ ಸುಧಿ