ಮಡಿಕೇರಿ, ಜೂ. 29: ದುಬೈನಿಂದ ಬಂದು ಕಣ್ಣೂರು ವಿಮಾನ ನಿಲ್ದಾಣದಿಂದ ಯಾವದೇ ನಿರ್ಬಂಧಗಳಿಲ್ಲದೆ ಪ್ರಯಾಣಿಕರು ಕೊಡಗಿನ ತಮ್ಮ ಮನೆಗಳಿಗೆ ತಲುಪಬಹುದು ಎನ್ನುವದು ಪ್ರಸಕ್ತ ಗೋಚರ ವಿದ್ಯಮಾನ. ಇನ್ನೊಂದೆಡೆ ಮಡಿಕೇರಿಯ ಕೋವಿಡ್ ಆಸ್ಪತ್ರೆಯ ಲ್ಲಿಯೂ ಅವ್ಯವಸ್ಥೆ ಯಿರುವದು ಕೇಳಿಬಂದ ಅಸಮಾಧಾನ. ದುಬೈನಿಂದ ವ್ಯಕ್ತಿಯೊಬ್ಬರು ಇತ್ತೀಚೆÀಗೆ ವೀರಾಜಪೇಟೆಯ ತಮ್ಮ ಮನೆಗೆ ಬಂದಿದ್ದರು. ಅವರಿಗೆ ಕೊರೊನಾ ಪಾಸಿಟಿವ್ ವರದಿಯಾಗಿ ಇದೀಗ ಮಡಿಕೇರಿಯ ಕೋವಿಡ್ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ವ್ಯಕ್ತಿ ತಮ್ಮ ಅನುಭವವನ್ನು ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ಹಂಚಿಕೊಂಡುದು ಹೀಗೆ:-: “ಸೇವಾ ಸಿಂಧು ಮೂಲಕ ನಾನು ಮತ್ತು ನನ್ನ ಬಾವ ದುಬೈನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆವು. ನನ್ನ ಪಾಸ್‍ಪೋರ್ಟ್ ನಲ್ಲಿ ನನ್ನ ಮೂಲ ಊರಾದ ಕೊಳಕೇರಿ ಎಂದಿದೆ. ಕಳೆದ 6 ತಿಂಗಳ ಹಿಂದೆ ನಾನು ವೀರಾಜಪೇಟೆಯಲ್ಲಿ ನೆಲೆಸಿದ್ದೇನೆ.

ನಾನು ಮತ್ತು ನನ್ನೊಂದಿಗೆ ದುಬೈನಿಂದ ಬಂದಿದ್ದ ನನ್ನ ಬಾವ ಒಂದು ದಿನ ಕೇರಳದಲ್ಲಿಯೇ ತಂಗಿದ್ದೆವು.

(ಮೊದಲ ಪುಟದಿಂದ) ಬಳಿಕ ಟ್ಯಾಕ್ಸಿ ಮಾಡಿಕೊಂಡು ಕೇರಳದ ತಲಪ್ಪಾಡಿ ಗೇಟ್‍ನಲ್ಲಿ ಯಾವದೇ ನಿರ್ಬಂಧವಿಲ್ಲದೆ ಸಾಗಿದೆವು. ಅಲ್ಲದೆ, ಕೊಡಗಿನ ಗಡಿ ಸಂಪಾಜೆ ಗೇಟ್‍ನಲ್ಲಿಯೂ ಯಾವದೇ ತಡೆಯಿಲ್ಲದೆ ಸಾಗಿದೆವು. ಅಂತೂ ವೀರಾಜಪೇಟೆ ತಲುಪುತ್ತಿದ್ದಂತೆ ಕಣ್ಣೂರು ಪೊಲೀಸರು ದೂರವಾಣಿ ಕರೆ ಮಾಡಿ ನಾವು ಕೊಡಗು ತಲುಪಿದ್ದನ್ನಷ್ಟೇ ಖಾತರಿಪಡಿಸಿ ಕೊಂಡರು. ಆದರೂ ನಮ್ಮ ಜವಾಬ್ದಾರಿಕೆಯಿರುವದರಿಂದ ನಾನು ವೀರಾಜಪೇಟೆಗೆ ಬರುವ ಮೊದಲೇ ನನ್ನ ಮನೆಯವರನ್ನು ಮುಂಜಾಗರೂಕತಾ ದೃಷ್ಟಿಯಿಂದ ಅವರ ತವರು ಮನೆ ಕೊಟ್ಟಮುಡಿಗೆ ತೆರಳುವಂತೆ ತಿಳಿಸಿದ್ದು ಅವರು ತೆರಳಿದ್ದರು. ನಾನು ಮತ್ತು ನನ್ನ ಬಾವ ಮಾತ್ರ ಸ್ವÀತಃ ನಿರ್ಧಾರದಿಂದ ಹೋಂ ಕ್ವಾರಂಟೈನ್‍ನಲ್ಲಿದ್ದೆವು. ಎರಡು ದಿನ ಕಳೆದ ಬಳಿಕ ಆಶಾ ಕಾರ್ಯಕರ್ತೆ ಯರು ಬಂದು ನಮ್ಮನ್ನು ವೀರಾಜಪೇಟೆಯಲ್ಲಿ ಕೋವಿಡ್ ಪರೀಕ್ಷೆÀ ಮಾಡಿಕೊಳ್ಳುವಂತೆ ಸೂಚಿಸಿದರು.

ನನ್ನ ಬಾವನಿಗೆ ನೆಗೆಟಿವ್ ಬಂದಿತ್ತು. ನನ್ನ ಪರೀಕ್ಷಾ ಫಲಿತಾಂಶ ತುಸು ಗೊಂದಲದಲ್ಲಿದ್ದುದರಿಂದ ಸೂಚನೆ ಮೇರೆಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದಾಗ ಪಾಸಿಟಿವ್ ಎಂದು ಗೊತ್ತಾಯಿತು. ಆದರೆ, ಆಸ್ಪತ್ರೆಯ ವಾತಾವರಣ ಸಮರ್ಪಕವಾಗಿಲ್ಲ. ಸ್ನಾನದ ಕೋಣೆಯಿದೆ; ಅದರ ಬಾಗಿಲು ಹಾಕಲಾಗುವದಿಲ್ಲ, ಶೌಚಾಲಯವಿದೆ; ಅದರ ಬಾಗಿಲಿನ ಚಿಲಕಗಳೆಲ್ಲ ಹಾಳಾಗಿದೆ. ಬಾಗಿಲು ಹಾಕಲು ಸಾಧ್ಯವಿಲ್ಲ. ಶುಚಿತ್ವದ ಕಾರ್ಯಗಳು ಅಷ್ಟು ಸಮರ್ಪಕವಾಗಿ ನಡೆಯುತ್ತಿಲ್ಲ . ಪಾಸಿಟಿವ್ ಬಂದವರೆಲ್ಲ ಒಂದೇ ಕೋಣೆಯಲ್ಲಿ ರುತ್ತಾರೆ. ನಾಲ್ಕು ಹಾಸಿಗೆಗಳಿÀವೆ. ಎರಡು ಹೊತ್ತು ಚಿತ್ರಾನ್ನದಂತಹ ಆಹಾರ ಬರುತ್ತದೆ. ಆದರೆ ಅದು ಬಿಸಿಯಿರುವದಿಲ್ಲ.

ಮೇಲ್ಭಾಗಕ್ಕೆ ಅರಿಶಿನ ಲೇಪನವಿರುತ್ತದೆ. ಸಣ್ಣ ಕಪ್‍ನಲ್ಲಿ ಟೀ ಬರುತ್ತದೆ. ಉಳಿದಂತೆ ಇಲ್ಲಿ ಇತರÀ ಪೌಷ್ಟಿಕ ಆಹಾರವೇನೂ ಇಲ್ಲ. ಹೊರಗಿನ ಸಂಪರ್ಕ ಇಲ್ಲದಿರುವ ದರಿಂದ ರೋಗಿಗಳ ಮಾನಸಿಕ ಸ್ಥಿತಿಯ ಮೇಲೆ ಈ ಒಳಗಿನ ವಾತಾವರಣ ಪರಿಣಾಮ ಬೀರುತ್ತದೆ. ನಾನು ಕೇಳಿದೆ: ಸಾಂಸ್ಥಿಕ ಕ್ವಾರÀಂಟೈನ್‍ಗೆ ಕಳುಹಿಸಿ, ನಾನು ಹೊಟೇಲ್‍ನಲ್ಲಿಯೇ ಕ್ವಾರಂಟೈನ್‍ನಲ್ಲಿ ಇರುತ್ತೇನೆ ಎಂದರೂ ಅದಕ್ಕೆ ಇಲ್ಲಿ ಸ್ಪಂದನ ದೊರೆತಿಲ್ಲ. ಈ ಆಸ್ಪತ್ರೆಯ ವಾತಾವರಣವೇ ನನಗೆ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ” ಎಂದು ತಮ್ಮ ಅಳಲು ತೋಡಿಕೊಂಡರು.