ಗುಡ್ಡೆಹೊಸೂರು, ಜೂ. 29: ಇಲ್ಲಿನ ತರಕಾರಿ ಅಂಗಡಿ ಮಾಲೀಕ ಕುಮಾರ್ ಅವರು ಸುಮಾರು 30 ಸಾವಿರ ಮೊತ್ತದ ತರಕಾರಿಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಿದರು. ಗ್ರಾಮದ ಹಲವು ಮಂದಿ ತರಕಾರಿ ಪಡೆದರು.
ಲಾಕ್‍ಡೌನ್ ಸಮಯದಲ್ಲಿ ಪೊಲೀಸರ ಅನುಮತಿ ಪಡೆದು ಕುಮಾರ ಅವರು ಮನೆ ಮನೆಗೆ ತೆರಳಿ ವ್ಯಾಪಾರ ನಡೆಸುತ್ತಿದ್ದರು. ಹುಣಸೂರಿನಿಂದ ಹೊಸದಾಗಿ ತರಕಾರಿಯನ್ನು ಪಡೆದು ಮುಂಜಾನೆಯಿಂದಲೇ ತರಕಾರಿಯನ್ನು ಉಚಿತವಾಗಿ ನೀಡಿದರು, ಕೇವಲ 1 ಗಂಟೆಯಲ್ಲಿ 30 ಸಾವಿರ ಬೆಲೆಯ ತರಕಾರಿ ಖಾಲಿಯಾಗಿದೆ. ಈ ಸಂದರ್ಭ ಅವರ ಪತ್ನಿ ಮಂಗಳ, ಪುತ್ರ ಪ್ರವೀಣ್ ಹಾಜರಿದ್ದರು. -ಗಣೇಶ್ ಕುಡೆಕ್ಕಲ್