ನಾಪೋಕ್ಲು, ಜೂ. 25: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿ.ಸಿ.ಟ್ರಸ್ಟ್ ವೀರಾಜಪೇಟೆ, ಮಡಿಕೇರಿ ತಾಲೂಕಿನ ವತಿಯಿಂದ ಹುದಿಕೇರಿಯ ತ್ರಿವೇಣಿ ಮಹಿಳಾಭವನದಲ್ಲಿ ಪರಿಸರ ಮಾಹಿತಿ ಹಾಗೂ ಸಸಿನಾಟಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುದಿಕೇರಿ ಒಕ್ಕೂಟ ಅಧ್ಯಕ್ಷೆ ತೀತಿರ ಊರ್ಮಿಳಾ ಸೋಮಯ್ಯ ವಹಿಸಿದ್ದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಜಡೇಗೌಡ, ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿ ಮೇಲ್ವಿಚಾರಕ ಕೆ. ಚೇತನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ವಲಯದ ಮೇಲ್ವಿಚಾರಕಿ ಎಂ. ಜಯಶ್ರೀ ಸೇವಾಪ್ರತಿನಿಧಿ ಪಾರ್ವತಿ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಸಿಗಳ ನಾಟಿ ಮಾಡಿ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು.