ಪೆರಾಜೆ, ಜೂ, 29: ಗ್ರಾಮ ಪಂಚಾಯತ್ ಪೆರಾಜೆ ವತಿಯಿಂದ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಪೆರಾಜೆ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ ವಹಿಸಿದರು. ಈ ಸಂದರ್ಭ ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ಗ್ರಾ.ಪಂ.ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಗ್ರಾ.ಪಂ. ಸದಸ್ಯರಾದ ಚಿನ್ನಪ್ಪ ಅಡ್ಕ, ಶಿವಕುಮಾರ್ ಅಮಚೂರ್, ಪ್ರಕಾಶ್ ದೊಡ್ಡಡ್ಕ, ಉದಯಚಂದ್ರ ಕುಂಬಳಚೇರಿ, ಶೀಲಾ ಚಿದಾನಂದ ನಿಡ್ಯಮಲೆ,ಸವಿತಾ ರವಿಕುಮಾರ್, ಪದ್ಮಾವತಿ ತಿರುಮಲೇಶ್ವರ, ದೇವಕ್ಕಿ ಬೆಟ್ಟದಪುರ,
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು, ಪಂಚಾಯತ್ ಕಾರ್ಯದರ್ಶಿ ಕುಮಾರ್, ಕಿರಿಯ ಪುರುಷ ಆರೋಗ್ಯ ಸಹಾಯಕ ರಘು, ಕಿ.ಆರೋಗ್ಯ ಸಹಾಯಕಿ ಶೈಲಜಾ, ಜಯಶ್ರೀ, ಹಾಗೂ ಪಂಚಾಯತ್ ಸಿಬ್ಬಂದಿಗಳು ಇದ್ದರು.