ಮಡಿಕೇರಿ, ಜೂ. 29: ಮಡಿಕೇರಿ ಹಾಗೂ ವೀರಾಜಪೇಟೆಯ ಆರ್ಮಿ ಕ್ಯಾಂಟೀನ್ನಲ್ಲಿ ತಾ. 30 ರಂದು (ಇಂದು) ಹಾಗೂ ಜು. 1 ರಂದು ಲೆಕ್ಕ ತಪಾಸಣೆ ಇರುವುದರಿಂದ ಈ ದಿನಗಳಲ್ಲಿ ವ್ಯಾಪಾರ-ವಹಿವಾಟು ಇರುವುದಿಲ್ಲ. ಅಲ್ಲದೆ ಜು. 2 ರಿಂದ ಕಾರ್ಡ್ದಾರರಿಗೆ ದಿನಕ್ಕೆ 50 ಮಂದಿಯಂತೆ ಕೇವಲ ಟೋಕನ್ ಮೂಲಕ ಸಾಮಗ್ರಿ ಪಡೆಯಲು ಅವಕಾಶವಿರುವುದಾಗಿ ವ್ಯವಸ್ಥಾಪಕರು ತಿಳಿಸಿದ್ದಾರೆ.