ಪೆÇನ್ನಂಪೇಟೆ, ಜೂ. 27 : ಇಲ್ಲಿನ ಬಸ್ಸು ನಿಲ್ದಾಣದಲ್ಲಿ ತಾ. 26ರಂದು ಕಾಣಿಸಿಕೊಂಡ ಆಗಂತು ಕರಿಂದಾಗಿ ಪೆÇನ್ನಂಪೇಟೆಯ ಸಾರ್ವಜನಿಕರು ಕೆಲ ಸಮಯ ಆತಂಕಕ್ಕೊಳಗಾಗಿದ್ದರು.
ಅಸ್ಸಾಂನ ಕಾರ್ಮಿಕರನ್ನು ಕರೆದುಕೊಂಡು ಬಂದ ವಾಹನವೊಂದು ಪೆÇನ್ನಂಪೇಟೆ ಬಸ್ಸು ನಿಲ್ದಾಣದಲ್ಲಿ ಕಾರ್ಮಿಕರನ್ನು ಇಳಿಸಿ ಹೊರಟು ಹೋಗಿತ್ತು.
ನಂತರ ಕಾರ್ಮಿಕರು ತಾವು ಸಮೀಪದ ತೋಟವೊಂದಕ್ಕೆ ತೆರಳಲು ಆಟೋವೊಂದನ್ನು ವಿಚಾರಿಸುತ್ತಿದ್ದ ಸಂದರ್ಭ ಅವರ ಕೈಯಲ್ಲಿದ್ದ ಮೊಹರನ್ನು (ಸೀಲ್) ಗಮನಿಸಿದ ಆಟೋ ಚಾಲಕರು ಅನುಮಾನಗೊಂಡು ಅವರನ್ನು ವಿಚಾರಿಸಿದಾಗ ಅವರು ಕೇರಳ ರಾಜ್ಯದಿಂದ ಬಂದಿರುವುದಾಗಿ ತಿಳಿಸಿದ್ದಾರೆ. ಒಬ್ಬ ಪುರುಷ, ಇಬ್ಬರು ಮಹಿಳೆಯರು ಹಾಗೂ ಮೂರು ಮಕ್ಕಳ ಕೈಗಳಿಗೆ ಚೆಕ್ಪೆÇೀಸ್ಟ್ನಲ್ಲಿ ಮೊಹರು ಹಾಕಲಾಗಿತ್ತು.
ನಾವು ಕೇರಳದಿಂದ ಬಂದ್ದಿದ್ದೇವೆ ಎಂದು ಹೇಳಿಕೊಳ್ಳುವ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದು, ಆಧಾರ್ ಕಾರ್ಡ್ ತೋರಿಸಲು ಹೇಳಿದಾಗ ನಮ್ಮ ಬಳಿ ಆದಾರ್ ಕಾರ್ಡ್ ಇಲ್ಲ ಎಂದು ಹೇಳಿದ್ದಾರೆ. ಯಾವುದೇ ವಿಧವಾದ ಗುರುತಿನ ಚೀಟಿಯಾಗಲಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಹೊರ ರಾಜ್ಯದಿಂದ ಬರುವಾಗ ನೀಡುವ ಪಾಸ್ ತೋರಿಸಿ ಎಂದು ಕೇಳಿದಾಗ, ಅದನ್ನು ನಮ್ನನ್ನು ಕರೆದುಕೊಂಡು ಬಂದ ವಾಹನ ಚಾಲಕ ತೆಗೆದುಕೊಂಡು ಹೋದ ಎಂದು ಹೇಳುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿತ್ತು. ಪೆÇನ್ನಂಪೇಟೆಯ ಲ್ಲಿರುವ ನಮ್ಮ ಕಡೆಯವರೊಬ್ಬರು ನಮ್ನನ್ನು ಇಲ್ಲಿಗೆ ಬರಲು ತಿಳಿಸಿದ ಕಾರಣ ಕೆಲಸಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿದ ಪೆÇನ್ನಂಪೇಟೆ ಕಂದಾಯ ಪರಿವೀಕ್ಷಕ ರಾಧಾಕೃಷ್ಣ ಸ್ಥಳಕ್ಕೆ ಆಗಮಿಸಿ ಅಸ್ಸಾಂ ಕಾರ್ಮಿPರÀ ಬಗ್ಗೆ ವಿಚಾರಿಸಿ ತಾಲೂಕು ವೈದ್ಯಾಧಿಕಾರಿ ಯತಿರಾಜ್ರವರ ಸಲಹೆಯ ಮೇರೆಗೆ ಗೋಣಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಥರ್ಮಲ್ ಸ್ಕ್ಯಾನ್ ಮಾಡಿಸಿ, ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಂತರ ಅಸ್ಸಾಂ ಕಾರ್ಮಿಕರು ಕಡಂಗ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಟೋದಲ್ಲಿ ತೆರಳಿರುವುದಾಗಿ ತಿಳಿದು ಬಂದಿದೆ.
ಹೊರ ಜಿಲ್ಲೆಯವರು ಈ ರೀತಿ ಕೊಡಗಿಗೆ ಬಂದು ಕೊಡಗಿನಲ್ಲಿ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಬೇಕಿದೆ.
-ಚನ್ನನಾಯಕ