ನಾಪೋಕ್ಲು, ಜೂ. 28: ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ರೈತರು ನೆಮ್ಮದಿಯಿಂದ ಬಾಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ತಾ.29. ಸೋಮವಾರ ಕಕ್ಕಬ್ಬೆ ಕುಂಜಿಲ ಗ್ರಾಮಪಂಚಾಯಿತಿ ಅವರಣದಲ್ಲಿ ಬುಡಕಟ್ಟು ಸಂಘಟನೆಗಳು ಹಾಗೂ ಪಂಚಾಯಿತಿ ವ್ಯಾಪ್ತಿಯ ಎಲ್ಲ ರೈತ ಕುಟುಂಬಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಧರಣಿ ನಡೆಸುವುದಾಗಿ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಇತ್ತೀಚೆಗೆ ಯವಕಪಾಡಿ ಗ್ರಾಮದ ಕುಡಿಯರ ಚಿನ್ನಪ್ಪ ಎಂಬವರ ಮೇಲೆ ಆನೆತುಳಿದು ಸಾವನ್ನಪ್ಪಿದ್ದಾರೆ. ಐದಾರು ವರ್ಷಗಳಿಂದ ನಿರಂತರವಾಗಿ ಕುಂಜಿಲ - ಕಕ್ಕ್ಕಬೆ ಗ್ರಾಮಗಳಲ್ಲಿ ಹಲವು ಆನೆಗಳು ಗುಂಪುಗುಂಪಾಗಿ ರೈತರ ತೋಟಗಳಿಗೆ ನುಗ್ಗಿ ಕಾಫಿ ಕಾಳುಮೆಣಸು ಬಾಳೆ, ಮತ್ತಿತರ ಉತ್ಪನ್ನಗಳನ್ನು ನಾಶಪಡಿಸುತ್ತಿವೆ. ಸಂಬಂಧಿಸಿದ ಇಲಾಖೆಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಆನೆಯನ್ನು ಕಾಡಿಗಟ್ಟುವ ಕೆಲಸ ಮಾಡಿಲ್ಲ. ರೈತರಿಗೆ ಬೆಳೆನಷ್ಟಪರಿಹಾರವನ್ನು ಸಹ ನೀಡಿಲ್ಲ. ಎಂದು ಆರೋಪಿಸಿರುವ ಅವರು ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.