ಗೋಣಿಕೊಪ್ಪ ವರದಿ, ಜೂ. 27: ಕರ್ನಾಟಕ ರಂಗ ಪರಿಷತ್ತು, ಕರ್ನಾಟಕ ಬೀದಿ ನಾಟಕ ಅಕಾಡೆಮಿ ಹಾಗೂ ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಸಹಯೋಗದಲ್ಲಿ ಶ್ರೀಧರ್ ನೆಲ್ಲಿತ್ತಾಯ ಅವರಿಗೆ ಸಿಜೆಕೆ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪೊನ್ನಂಪೇಟೆ ಕಾವೇರಿ ಕೊಡವ ಕೂಟ ಸಭಾಂಗಣದಲ್ಲಿ ಆಯೋಜಿಸಿದ್ದ ಸಿ.ಜಿ. ಕೃಷ್ಣಮೂರ್ತಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಈ ಸಂದರ್ಭ ಬೀದಿ ನಾಟಕ ಅಕಾಡೆಮಿ ಕೊಡಗು ಸಂಚಾಲಕ ಅಡ್ಡಂಡ ಕಾರ್ಯಪ್ಪ, ಹಿರಿಯ ಕಲಾವಿದ ಎಸ್. ಎಲ್. ಶಿವಣ್ಣ, ಕಾವೇರಿ ಕೊಡವ ಕೂಟ ಹಿರಿಯ ಸದಸ್ಯೆ ಬಲ್ಯಮಂಡ ದೇವಕ್ಕಿ, ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಉಪಾಧ್ಯಕ್ಷ ಚೆಪ್ಪುಡೀರ ಕೆ. ಸೋಮಯ್ಯ, ಕಲಾವಿದೆ ಅಡ್ಡಂಡ ಅನಿತಾ ಕಾರ್ಯಪ್ಪ ಇದ್ದರು.