ಮಡಿಕೇರಿ, ಜೂ. 28: ಕೊಡಗು ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಬಿ.ಕೆ. ರವೀಂದ್ರ ರೈ ನೇತೃತ್ವದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗಾಗಿ ನೀಡಲು ಲೋಕೇಶ್ ಕುಮಾರ್ ಮತ್ತು ಡಾ. ರೂಪೇಶ್ ಗೋಪಾಲ್ ಸಮ್ಮುಖದಲ್ಲಿ 3 ಸಾವಿರ ಜ್ಯೂಸ್ ಪ್ಯಾಕೆಟ್‍ಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಚ್.ಆರ್. ಮುರಳೀಧರ, ಸಹ ಕಾರ್ಯದರ್ಶಿ ದರ್ಶನ್ ಬೋಪಯ್ಯ ಇತರರು ಭಾಗವಹಿಸಿದ್ದರು.