ಸೋಮವಾರಪೇಟೆ: ಸಮೀಪದ ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಚೌಡ್ಲು, ಹಾನಗಲ್ಲು, ತೋಳೂರು ಶೆಟ್ಟಳ್ಳಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗೀತಾ, ಅರ್ಪಿತಾ, ಲಲಿತ, ದಿವ್ಯ, ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸವಿತ, ಸಂಧ್ಯಾ, ಜಯಲಕ್ಷ್ಮೀ, ಉಷಾ, ಗಾಯಿತ್ರಿ, ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಂದು, ಪಾವನ, ರಜಿನಿ, ದಿವ್ಯ, ಅರ್ಪಿತಾ, ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಜಾತ ಐ.ಜೆ, ಗೀತಾ, ಸುರೇಖಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ನಾಪೋಕ್ಲು: ಸಮೀಪದ ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಶಾಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಶ್ರಮಿಸಿದ ವಿವಿಧ ಆಶಾ ಕಾರ್ಯಕರ್ತೆಯರಿಗೆ ನಗದು ಪುರಸ್ಕಾರ ರೂ.3000 ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ, ಉಪಾಧ್ಯಕ್ಷ ಕೊಪ್ಪಡ ತಿಮ್ಮಯ್ಯ, ಕಾರ್ಯನಿರ್ವಹಣಾಧಿಕಾರಿ ಕಾವೇರಮ್ಮ ಮತ್ತು ನಿರ್ದೇಶಕರು ಹಾಜರಿದ್ದರು. ಕೂಡಿಗೆ: ಇಲ್ಲಿಗೆ ಸಮೀಪದ ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಗೌರವವಿಸಲಾಯಿತು.

ಈ ಸಂದರ್ಭ ಸಹಕಾರ ಸಂಘ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಉಪಾಧ್ಯಕ್ಷ ಬೇಲಯ್ಯ ಸೇರಿದಂತೆ ಸಂಘದ ನಿರ್ದೇಶಕರುಗಳಾದ ಲೋಕೇಶ್, ಧರ್ಮಪ್ಪ ರುದ್ರಪ್ಪ, ರವಿ ನಾಗಮ್ಮ ಅನುಪಮ, ಪದ್ಮಬಾಯಿ ಸೇರಿದಂತೆ ವ್ಯವಸ್ಥಾಪಕ ಜೀವನ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.ಭಾಗಮಂಡಲ: ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೊರೊನಾ ವಾರಿಯರ್ಸ್ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು.

ಭಾಗಮಂಡಲ ಠಾಣಾಧಿಕಾರಿ ಮಹಾದೇವ, ಭಾಗಮಂಡಲ ಆರೋಗ್ಯ ಇಲಾಖೆಯ ಡಾ. ಪೊನ್ನಮ್ಮ, ಭಾಗಮಂಡಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್, ಚೆಟ್ಟಿಮಾನಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಂಜಲಿ ಇವರುಗಳನ್ನು ಸಂಘದ ಅಧ್ಯಕ್ಷ ಹೊಸೂರು ಸತೀಶ್‍ಕುಮಾರ್ ಸನ್ಮಾನಿಸಿದರು. ಸಹಕಾರ ಸಂಘದ ಸಹಕಾರ ನಿಬಂಧಕರುಗಳ ಕಚೇರಿ ಅಧಿಕಾರಿ ಪಿ.ಬಿ. ಮೋಹನ್ ಮತ್ತು ಸಹಕಾರ ಸಂಘದ ಉಪನಿಬಂಧಕರುಗಳ ಕಚೇರಿ ಅಧಿಕಾರಿ ಹಾಗೂ ಹತ್ತು ಜನ ಆಶಾ ಕಾರ್ಯಕರ್ತೆಯರಾದ ಆರತಿ, ಶೋಭಾ, ದೇಚುಕುಮಾರಿ, ರತ್ನಾವತಿ, ಪುಷ್ಪಾವತಿ, ಯಮುನಾ, ಶೈಲಜಾ, ಉಷಾಆಳ್ವ, ಚಂದ್ರಾವತಿ, ಲೀನಾ ಇವರುಗಳಿಗೆ ಬ್ಯಾಂಕಿನ ಲಾಭದ ಹಣವನ್ನು ತಲಾ ರೂ.3000 ಗೌರವಧನ ನೀಡಿ ಶಾಲುಹೊದಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಹೊಸೂರು ಸತೀಶ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ನಿರ್ದೇಶಕರಾದ ನಂಜುಂಡಪ್ಪ, ಬ್ಯಾಂಕಿನ ಸಿಬ್ಬಂದಿ ಲಲಿತಾ, ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ನಾಪೆÇೀಕ್ಲು: ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾವೇರಮ್ಮ, ರಮ್ಯಾ, ಶಹನಾಬಾನು, ಚಂದ್ರಕಲಾ ಮತ್ತು ಪೆÇನ್ನಮ್ಮ ಅವರನ್ನು ನಾಪೆÇೀಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಪೆÇ್ರೀತ್ಸಾಹ ಧನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅರೆಯಡ ಅಶೋಕ್, ಉಪಾಧ್ಯಕ್ಷೆ ಕೇಲೇಟಿರ ಮಾಲಾ ಬೋಪಯ್ಯ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಹಾಗೂ ಸಂಘದ ನಿರ್ದೇಶಕ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರಾದ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಎನ್.ಎಸ್.ಉದಯ ಶಂಕರ್, ಕಾಂಡಂಡ ಜಯ ಕರುಂಬಯ್ಯ, ಚೋಕಿರ ಪ್ರಭು ಪೂವಪ್ಪ, ಚೀಯಕಪೂವಂಡ ಸತೀಶ್ ದೇವಯ್ಯ, ಬಿದ್ದಾಟಂಡ ರಾಧಾ ಗಣಪತಿ, ಕುಂಡ್ಯೋಳಂಡ ಕವಿತಾ ಮುತ್ತಣ್ಣ, ಕುಂದೈರಿರ ಕಿರಣ್, ಕೃಷ್ಣಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಚಾಳಿಯಂಡ ವಿಜು ಪೂಣಚ್ಚ ಇದ್ದರು.