ಮಡಿಕೇರಿ, ಜೂ. 28: ಇಲ್ಲಿಗೆ ಸಮೀಪದ ಹೆರವನಾಡು ಗ್ರಾಮದ ಅಪ್ಪಂಗಳದಲ್ಲಿ ಕಾಡಾನೆಗಳ ಹಿಂಡು ಸೇರಿಕೊಂಡಿದ್ದು ನಷ್ಟವುಂಟು ಮಾಡುತ್ತಿದೆ. ಅಲ್ಲಿನ ಜ್ಯೋತಿ ಎಸ್ಟೇಟ್‍ನಲ್ಲಿ ಕಳೆದೆರಡು ದಿನಗಳಿಂದ ದಾಂಧಲೆ ನಡೆಸಿರುವ ಸುಮಾರು 6 ಆನೆಗಳ ಹಿಂಡು ಬಾಳೆ, ತೆಂಗಿನ ಫಸಲನ್ನು ನಾಶಪಡಿಸಿವೆ.

ಈ ಬಗ್ಗೆ ತೋಟದ ಮಾಲೀಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖಾ ಸಿಬ್ಬಂದಿಗಳು ಆನೆಗಳನ್ನು ಅಟ್ಟುವ ಪ್ರಯತ್ನ ನಡೆಸಿದ್ದಾರೆ. ಆದರೆ, ಅದೇ ವ್ಯಾಪ್ತಿಯಲ್ಲಿ ಮತ್ತೆ ಆನೆಗಳು ಸೇರಿಕೊಳ್ಳುತ್ತಿವೆ. ಈ ಬಗ್ಗೆ ಸಾರ್ವಜನಿಕರು ಆತಂಕಗೊಂಡಿದ್ದಾರೆ.