ಮಡಿಕೇರಿ, ಜೂ. 26: ಇತ್ತೀಚೆಗೆ ಕುಶಾಲನಗರ ಪೊಲೀಸ್ ಠಾಣೆ ಎದುರು ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾಂಗ್ರೆಸ್ ಪ್ರಮುಖ ವಿ.ಪಿ. ಶಶಿಧರ್ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿದ್ದು, ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. ಆದ್ದರಿಂದ ವಿ.ಪಿ. ಶಶಿಧರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಹಾಗೂ ಮಡಿಕೇರಿ ನಗರ ಬಿಜೆಪಿ ವತಿಯಿಂದ ನಗರ ಠಾಣೆ ಎದುರು ಪ್ರತಿಭಟನೆ ನಡೆಸಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರಿಗೆ ದೂರು ಸಲ್ಲಿಸಲಾಯಿತು.

ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಕೇಶ್, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ, ವಕೀಲ ಕೃಷ್ಣಮೂರ್ತಿ, ನಗರಸಭಾ ಮಾಜಿ ಸದಸ್ಯರುಗಳಾದ ಕೆ.ಎಸ್. ರಮೇಶ್, ಅನಿತಾ ಪೂವಯ್ಯ, ಮಾಜಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಇತರರಿದ್ದರು.

ಪೊಲೀಸ್ ದೂರು

ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಅವರು ಅವಹೇಳನಕಾರಿ ಮಾತುಗಳನ್ನಾಡಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಮಾದಾಪುರ ಜಂಬೂರು ಗ್ರಾಮದ ನಿವಾಸಿ ಎ.ಸುನಿಲ್ ಎಂಬವರು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗಡಿಪಾರಿಗೆ ಆಗ್ರಹ

ದೇಶದ ಪ್ರಧಾನ ಮಂತ್ರಿ ನರೇಂದ್ರಮೋದಿಯವರನ್ನು ನಿಂದಿಸಿರುವ ವಿ.ಪಿ.ಶಶಿಧರ್ ಅವರ ಮೇಲೆ ಪೊಲೀಸ್ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿ ಗೋಣಿಕೊಪ್ಪಲುವಿನ ಬಸ್ ನಿಲ್ದಾಣದಲ್ಲಿ ವೀರಾಜಪೇಟೆ ಬಿಜೆಪಿ ಮಂಡಲದ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ನೆಲ್ಲೀರ ಚಲನ್ ಕುಮಾರ್, ಶಶಿಧರ್ ಅವರನ್ನು ಬಂಧಿಸುವಂತೆ ಹಾಗೂ ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಕೊಡಗು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ ಕಾಂಗ್ರೆಸ್ ಪ್ರತಿಭಟನೆÀ ವೇಳೆ ದೇಶದ ಪ್ರಧಾನಿಯ ಕುರಿತಾಗಿ ಅವಹೇಳನಕಾರಿ ಯಾಗಿ ಮಾತನಾಡಿದ ಶಶಿಧರ್ ಅವರಿಗೆ ಕಾಂಗ್ರೆಸ್ ಮುಖಂಡರು ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದು ದೂರಿದರು.

ಪಕ್ಷದ ಮುಖಂಡರಾದ ಗುಮ್ಮಟೀರ ಕಿಲನ್ ಗಣಪತಿ, ಆದೇಂಗಡ ವಿನು ಚಂಗಪ್ಪ, ಅಜ್ಜಿಕುಟ್ಟೀರ ಪ್ರವೀಣ್,ಚೆಪ್ಪುಡೀರ ಮಾಚು,ಕಟ್ಟೇರ ಈಶ್ವರ್, ಸುವೀನ್ ಗಣಪತಿ, ಸುಬ್ರಮಣ್ಯ, ಒಬಿಸಿ ಅಧ್ಯಕ್ಷ ಕೆ.ರಾಜೇಶ್,ಸುರೇಶ್ ರೈ, ಚೇಂದಂಡ ಸುಮಿ ಸುಬ್ಬಯ್ಯ, ತೀತಿರ ಊರ್ಮಿಳಾ, ರತಿ ಅಚ್ಚಪ್ಪ, ಬೊಳ್ಳಜೀರ ಸುಶೀಲ, ಕೆ.ಪಿ.ಬೋಪಣ್ಣ, ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಸೋಮೆಯಂಡ ಕವನ್, ಪ್ರ. ಕಾರ್ಯದರ್ಶಿ ಭರತ್, ಚೆರಿಯಪಂಡ ಸಚಿನ್, ಖಭೀರ್ ದಾಸ್, ಪ್ರದೀಪ್ ರಾಯ್, ಮುರುಗೇಶ್, ಸುಜಾ ಪೂಣಚ್ಚ, ವಿವೇಕ್, ಪುನೀತ್, ಮಾಯಮುಡಿ ಮಂಜು, ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ವೃತ್ತ ನಿರೀಕ್ಷರಾದ ರಾಮರೆಡ್ಡಿ ಹಾಗೂ ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಿ.ಪಿ.ಶಶಿಧರ್ ವಿರುದ್ಧ ತಕ್ಷಣವೇ ಎಫ್.ಐ.ಆರ್. ದಾಖಲಿಸುವಂತೆ ನೆಲ್ಲಿರ ಚಲನ್ ವೃತ್ತ ನಿರೀಕ್ಷರಾದ ರಾಮರೆಡ್ಡಿಯವರನ್ನು ಆಗ್ರಹಿಸಿದರು. ಈ ಸಂದರ್ಭ ರಾಮರೆಡ್ಡಿಯವರು ಕೂಡಲೇ ದೂರು ದಾಖಲು ಮಾಡಲು ಸಾಧ್ಯವಿಲ್ಲ. ಹಲವು ನಿಯಮಗಳನ್ನು ಪಾಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದಾಗ, ಇವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಆಕ್ರೋಶಗೊಂಡು ಕೂಡಲೇ ಎಫ್.ಐ.ಆರ್. ದಾಖಲಿಸುವಂತೆ ಒತ್ತಾಯಿಸಿದರು. ಈ ಸಂಧರ್ಭ ಪೊಲೀಸರು ಹಾಗೂ ಪ್ರತಿಭಟನಾ ಕಾರರ ನಡುವೆ ವಾಗ್ವಾದ ನಡೆಯಿತು.

ಖಂಡನೆ

ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‍ನ ವಿ.ಪಿ. ಶಶಿಧರ್ ಅವರು ನಿಂದಿಸಿರುವುದನ್ನು ನಾಪೆÇೀಕ್ಲು ಹೋಬಳಿ ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಪೆÇೀಕ್ಲು ಹೋಬಳಿ ಬಿಜೆಪಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಹಾಗೂ ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದ ನಾಯಕರಾಗಿದ್ದಾರೆ. ಹೀಗಿರುವಾಗ ಕುಶಾಲನಗರ ಪೆÇಲೀಸ್ ಠಾಣೆ ಎದುರು ಪ್ರಧಾನಿಯನ್ನು ನಿಂದಿಸುವ ಸಂದರ್ಭ ಎಂ.ಎಲ್.ಸಿ ಶಾಂತೆಯಂಡ ವೀಣಾ ಅಚ್ಚಯ್ಯ ಅವರೂ ಕೂಡ ಅದಕ್ಕೆ ಆಕ್ಷೇಪ ವ್ಯಕ್ತಪಡಿಸದಿರುವದು ಅಚ್ಚರಿ ತಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಶೋಭೆ ತರುವಂತದಲ್ಲ. ಶಶಿಧರ್ ಅವರನ್ನು ಪಕ್ಷದಿಂದ ಕೂಡಲೇ ಉಚ್ಛಾಟನೆ ಮಾಡಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಕೃಷಿ ಮೋರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ನಾಯಕರಾದ ಪಾಡಿಯಮ್ಮಂಡ ಮನು ಮಹೇಶ್, ಕೇಲೇಟಿರ ದೀಪು ದೇವಯ್ಯ, ಕಂಗಾಂಡ ಜಾಲಿ ಪೂವಪ್ಪ, ಶಿವಚಾಳಿಯಂಡ ಕಿಶೋರ್ ಬೋಪಣ್ಣ, ಪಾಡಿಯಮ್ಮಂಡ ಸುಭಾಷ್ ಇದ್ದರು.

ಕುಶಾಲನಗರ

ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ವಿರುದ್ದ ಕುಶಾಲನಗರ ಪೆÇಲೀಸ್ ಠಾಣೆಗೆ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಶ್ಲೀಲ ಪದ ಬಳಿಸಿ ನಿಂದಿಸಿದ ವಿ.ಪಿ.ಶಶಿಧರ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್. ಮನುಕುಮಾರ್ ಕುಶಾಲನಗರದ ವೃತ್ತ ನಿರೀಕ್ಷಕ ಮಹೇಶ್ ಅವರಿಗೆ ಪೆÇಲೀಸ್ ದೂರು ಸಲ್ಲಿಸಿದರು.

ಈ ಸಂದರ್ಭ ಬಿಜೆಪಿ ತಾಲೂಕು ಪ್ರಮುಖರಾದ ಕುಮಾರಪ್ಪ, ಎಂ.ಡಿ.ಕೃಷ್ಣಪ್ಪ, ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ಶಿವಾಜಿ, ಪ.ಪಂ. ಸದಸ್ಯ ಅಮೃತ್ ರಾಜ್, ಮುಖಂಡರಾದ ಜಿ.ಎಲ್. ನಾಗರಾಜ್, ವಿ.ಡಿ. ಪುಂಡರೀಕಾಕ್ಷ, ಮಂಜು, ನವನೀತ್ ಮತ್ತಿತರರು ಇದ್ದರು.