ಮಡಿಕೇರಿ, ಜೂ. 25: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆ ಸಂತೆ ವಹಿವಾಟು ರದ್ದುಗೊಳಿಸಲಾಗಿದೆ. ಈ ದಿಸೆಯಲ್ಲಿ ಮಡಿಕೇರಿಯಲ್ಲಿ ಮುಂದಿನ 15 ದಿನಗಳ ತನಕ ಯಾವುದೇ ಸಂತೆ ವ್ಯಾಪಾರ ನಡೆಸದಂತೆ ನಿರ್ಬಂಧಿಸ ಲಾಗಿದೆ ಎಂದು ಪ್ರಭಾರ ಪೌರಾಯುಕ್ತ ಶ್ರೀನಿವಾಸ್ ಘೋಷಿಸಿದ್ದಾರೆ.ಚೆಟ್ಟಿಮಾನಿ: ಕುಂದಚೇರಿ ಗ್ರಾ.ಪಂ. ವ್ಯಾಪ್ತಿಯ ಚೆಟ್ಟಿಮಾನಿಯಲ್ಲಿ ವ್ಯಾಪಾರ ವಹಿವಾಟನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ತನಕ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.12 ಗಂಟೆ ಬಳಿಕ ವಹಿವಾಟು ಬಂದ್ಶನಿವಾರಸಂತೆ: ಶನಿವಾರಸಂತೆ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಇಂದು ತುರ್ತು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮುಂದಿನ 10 ದಿನಗಳವರೆಗೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಲು ತೀರ್ಮಾನದೊಂದಿಗೆ ಬಳಿಕ ಸ್ವಯಂ ಬಂದ್‍ಗೊಳಿಸಲು ತೀರ್ಮಾನಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಸರ್ದಾರ್ ಅಹ್ಮದ್, ಪದಾಧಿಕಾರಿಗಳು ತಿಳಿಸಿದ್ದಾರೆ. 4 ಸಂತೆಗಳು ರದ್ದು

ಸೋಮವಾರಪೇಟೆ: ತಾಲೂಕಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯನ್ವಯ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು, ತಾಲೂಕಿನ ಪ್ರಮುಖ 4 ಸಂತೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕೊಡ್ಲಿಪೇಟೆ ಸಮೀಪದ ಶಿರಂಗಾಲ ಗ್ರಾಮದಲ್ಲಿ ವ್ಯಕ್ತಿಗೆ ಸೋಂಕು ತಗುಲಿದ್ದರಿಂದ ಭಾನುವಾರ ನಡೆಯುವ ಕೊಡ್ಲಿಪೇಟೆ ಸಂತೆ ರದ್ದುಗೊಳಿಸಲಾಗಿದೆ. ಶನಿವಾರಸಂತೆ ಹೋಬಳಿಯ ದೊಡ್ಡಳ್ಳಿ, ಮುಳ್ಳೂರಿನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ್ದರಿಂದ ಶನಿವಾರ ನಡೆಯುವ ಶನಿವಾರಸಂತೆಯ ಸಂತೆ, ಪಟ್ಟಣ ಸಮೀಪದ ಕರ್ಕಳ್ಳಿ ಬಳಗುಂದದಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ಸೋಮವಾರ ನಡೆಯುವ ಸೋಮವಾರಪೇಟೆ ಸಂತೆ, ಕುಶಾಲನಗರದ ರಥಬೀದಿಯಲ್ಲಿ ಸೋಂಕು ಪತ್ತೆಯಾದ್ದರಿಂದ ಮಂಗಳವಾರ ನಡೆಯುವ ಕುಶಾಲನಗರ ಸಂತೆಗಳನ್ನು ರದ್ದುಗೊಳಿಸಲಾಗಿದೆ.

ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ತಾಲೂಕಿನ ಕಂಟೈನ್‍ಮೆಂಟ್ ಏರಿಯಾ ವ್ಯಾಪ್ತಿಗೆ ಒಳಪಡುವ 4 ಸಂತೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಹಶೀಲ್ದಾರ್ ಗೋವಿಂದ ರಾಜು ತಿಳಿಸಿದ್ದಾರೆ. ಉಳಿದಂತೆ ಕೂಡಿಗೆ, ಮಾದಾಪುರ, ಸುಂಟಿಕೊಪ್ಪ ಸಂತೆಗಳು ನಡೆಯಲಿವೆ.

ಕುಶಾಲನಗರ: ಸೋಮವಾರ ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ (ಮೊದಲ ಪುಟದಿಂದ) ವೈರಸ್ ಸೋಂಕು ಪೀಡಿತ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಕುಶಾಲನಗರ ಸಂತೆಯನ್ನು ತಾ. 30ರ ತನಕ ರದ್ದುಗೊಳಿಸಿ ತಹಶೀಲ್ದಾರ್ ಗೋವಿಂದರಾಜ್ ಆದೇಶ ಹೊರಡಿಸಿದ್ದಾರೆ.

ಶನಿವಾರಸಂತೆ: ಶನಿವಾರಸಂತೆ ವ್ಯಾಪ್ತಿಯಲ್ಲಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಜನಸಂದಣಿ ನಿಯಂತ್ರಿಸಲು ಸಂತೆ ರದ್ದು ಪಡಿಸಿರುವುದಾಗಿ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.

2 ಗಂಟೆ ಬಳಿಕ ವಹಿವಾಟು ಬಂದ್

ಚೆಟ್ಟಳ್ಳಿ: ಚೆಟ್ಟಳ್ಳಿ ವರ್ತಕರ ಸಂಘದಿಂದ ಎಲ್ಲಾ ಮಾಲೀಕರ ಒಪ್ಪಿಗೆಯ ಮೇರೆಗೆ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸುವಂತೆ ತೀರ್ಮಾನಿಸಲಾಗಿದೆ.