ಮಡಿಕೇರಿ, ಜೂ. 25: ಈ ಸಂಜೆ ಇಲ್ಲಿನ ಇಂದಿರಾನಗರದಲ್ಲಿ ಆಟೋ ಚಾಲಕ ನಟರಾಜ್ ತನ್ನ ರಿಕ್ಷಾವನ್ನು ನಿಲ್ಲಿಸುವ ವೇಳೆ ಆಕಸ್ಮಿಕ ಅವಘಡಗೊಂಡು ಪ್ರಪಾತಕ್ಕೆ ಉರುಳಿದೆ. ಆಟೋರಿಕ್ಷಾ ಜಖಂಗೊಂಡಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. -ಟಿ.ಜಿ. ಸತೀಶ್