ಸುಂಟಿಕೊಪ್ಪ, ಜೂ. 26: ಸುಂಟಿಕೊಪ್ಪ ವ್ಯಾಪ್ತಿಯ ಸವಿತ ಸಮಾಜದ ವತಿಯಿಂದ ಕೊಡಗಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ತಾ. 26 ರಿಂದ ಜುಲೈ 1 ರವರೆಗೆ ಸ್ವಯಂ ಪ್ರೇರಿತವಾಗಿ ಸುಂಟಿಕೊಪ್ಪದ ಎಲ್ಲಾ ಸಲೂನ್‍ಗಳನ್ನು ಮುಚ್ಚಲು ನಿರ್ದರಿಸಲಾಗಿದೆ ಎಂದು ಸವಿತ ಸಮಾಜದ ಪದಾಧಿಕಾರಿಗಳು ತಿಳಿಸಿದ್ದಾರೆ.
ಕುಶಾಲನಗರ : ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರದ ಪಟ್ಟಣ ವ್ಯಾಪ್ತಿಯಲ್ಲಿ ತಾ. 26 ರಿಂದ ಜು. 5ರ ತನಕ ಸಲೂನ್‍ಗಳನ್ನು ಮುಚ್ಚಲು ಕುಶಾಲನಗರ ಸವಿತಾ ಸಮಾಜ ನಿರ್ಧರಿಸಿದೆ.
ಸಂಘದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು ಜುಲೈ 5ರ ತನಕ ಕುಶಾಲನಗರ ಪಟ್ಟಣ ವ್ಯಾಪ್ತಿಯ ಸವಿತಾ ಸಮಾಜದ ಎಲ್ಲಾ ಸದಸ್ಯರು ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಸಂಘದ ಪ್ರಕಟಣೆ ತಿಳಿಸಿದೆ.