ಕೂಡಿಗೆ, ಜೂ. 26 ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ವತಿಯಿಂದ ತಾ. 30 ರಂದು ನಂಜರಾಯಪಟ್ಟಣದಲ್ಲಿ ನಡೆಯಬೇಕಾಗಿದ್ದ ಮಣ್ಣು ಮತ್ತು ಆರೋಗ್ಯ ಅಭಿಯಾನ ಮತ್ತು ರೈತ ಮೇಳದ ಕಾರ್ಯಕ್ರಮವನ್ನು ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ ತಿಳಿಸಿದ್ದಾರೆ.