ಮಡಿಕೇರಿ, ಜೂ. 26: ಕೊಡವ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಂಬಂತೆ ಮಾತು ಇಲ್ಲದ ಕೊಡವ ಕಿರುಚಿತ್ರವೊಂದು ತಯಾರಾಗುತ್ತಿದೆ. ವಾಯ್ಸ್ ಆಫ್ ಕೊಡವ ಬ್ಯಾನರ್ ನಲ್ಲಿ ‘ತಗ್‍ರ್ದಿ- ಖಿhe ಠಿಡಿiಜe ’ ಎಂಬ ಈ ಸಿನಿಮಾ ವಾಯ್ಸ್ ಆಫ್ ಕೊಡವ ಕೂಟದ ಆಸಕ್ತಿ ಸಹಕಾರದೊಂದಿಗೆ ತೆರೆಗೆ ಬರಲಿದ್ದು, ಈ ಚಿತ್ರದ ಪೋಸ್ಟರ್ ಬಿಡುಗಡೆ ನಿನ್ನೆ ವಾಯ್ಸ್ ಆಫ್ ಕೊಡವ ವಾಟ್ಸಾಪ್ ಗುಂಪಿನಲ್ಲಿ ಬಿಡುಗಡೆಯಾಗಿದೆ ಎಂದು ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.
ಚಿತ್ರದ ನಿರ್ಮಾಪಕರಾಗಿ ಕಾವಾಡಿಚಂಡ ಪವಿತ್ರ ಉತ್ತಯ್ಯ ಹಾಗೂ ಸಹ ನಿರ್ಮಾಪಕರುಗಳಾಗಿ ವಕೀಲ ನೆಲ್ಲಮಕ್ಕಡ ಜಫ್ರಿಮಾದಯ್ಯ, ಕೊಡವ ರೈಡರ್ಸ್ ಕ್ಲಬ್‍ನ ಅಜ್ಜಿಕುಟ್ಟಿರ ಪ್ರಥ್ವಿಸುಬ್ಬಯ್ಯ, ಸಣ್ಣುವಂಡ ದರ್ಶನ್ ಕಾವೇರಪ್ಪ ಅವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ನಾಡಿನ ವ್ಯಾಪ್ತಿಯ ಕಲಾವಿದರು ಹಾಗೂ ತಂತ್ರಜ್ಞರು ಸೇರಿ ತಯಾರಾಗುತ್ತಿರುವ ಈ ಚಿತ್ರವನ್ನು ಕಳ್ಳಿಚಂಡ ದೀನ ಉತ್ತಪ್ಪ ನಿರ್ದೇಶಿಸುತ್ತಿದ್ದಾರೆ.