ಮಡಿಕೇರಿ, ಜೂ.26 : ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರೆಗೆ ಸೀಮಿತಗೊಳಿಸಲು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ. ಅಲ್ಲದೆ ಭಾನುವಾರ ಸಂಪೂರ್ಣ ಬಂದ್ ನಡೆಸಲು ಚಿಂತನೆ ನಡೆಸಿದ್ದು, ಈ ವ್ಯವಸ್ಥೆ ಜುಲೈ 4ರವರೆಗೆ ಜಾರಿಯಲ್ಲಿರಲಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚೇಂಬರ್ ಜಿಲ್ಲಾಧ್ಯಕ್ಷ ಎಂ.ಬಿ.ದೇವಯ್ಯ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನೆÉೀ ದಿನೆÉೀ ಹೆಚ್ಚುತ್ತಿದೆ. ಇದರಿಂದ ವ್ಯಾಪಾರಸ್ಥರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಹಿರಿಯ ನಾಗರಿಕರು ಕೂಡ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿ ಕೊಂಡಿರುವುದರಿಂದ ಅವರಲ್ಲೂ ತಳಮಳ ಉಂಟಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯ ಬಗ್ಗೆ ಚೇಂಬರ್‍ನ ಸ್ಥಾನೀಯ ಸಮಿತಿಗಳು ಜಿಲ್ಲಾ ಚೇಂಬರ್‍ನ ಗಮನ ಸೆಳೆದ ಕಾರಣ ತುರ್ತು ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

ಅರ್ಥಿಕ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಾಕ್‍ಡೌನ್ ಸಡಿಲಗೊಳಿಸಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಿದ್ದವು. ಆದರೆ ಇದೀಗ ಕೊರೊನಾ ಸೋಂಕು ಮಿಂಚಿನ ವೇಗದಲ್ಲಿ ಪಸರಿಸುತ್ತಿರು ವುದರಿಂದ ವರ್ತಕರ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜು.4 ರವರೆಗೆ ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸುವಂತೆ ಮತ್ತು ಮಧ್ಯಾಹ್ನದ ಬಳಿಕ ಹಾಗೂ ಭಾನುವಾರ ಪೂರ್ಣ ದಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಕರೆ ನೀಡಿದರು.

ಈ ನಿರ್ಧಾರದಲ್ಲಿ ವರ್ತಕ ಸಮೂಹದ ರಕ್ಷಣೆಯ ಜೊತೆಗೆ ಸಾರ್ವಜನಿಕರ ಹಿತದೃಷ್ಟಿಯೂ ಅಡಗಿದೆ. ಜಿಲ್ಲೆಯ ಜನಪ್ರತಿನಿಧಿ ಗಳೊಂದಿಗೂ ಚರ್ಚಿಸಲಾಗಿದ್ದು, ಅವರುಗಳು ಕೂಡ ಚೇಂಬರ್‍ನ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ದೇವಯ್ಯ ಸ್ಪಷ್ಟಪಡಿಸಿದರು.

ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದರಿಂದ ಸಣ್ಣ ವ್ಯಾಪಾರಿಗಳು ಸೇರಿದಂತೆ ಹಲವು ವರ್ಗದ ಜನರಿಗೆ ತೊಂದರೆಯಾಗಲಿದೆ. ಆದರೂ ಇಂದಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವಾಗಿದ್ದು, ಇಂತಹ ವರ್ಗದ ಜನರ ರಕ್ಷಣೆಗೆ ಸರ್ಕಾರ ಯೋಜನೆ ರೂಪಿಸಬೇಕೆಂದು ಅವರು ಮನವಿ ಮಾಡಿದರು.

ಜಿಲ್ಲಾ ಚೇಂಬರ್‍ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಪೋಷಕÀ ಜಿ.ಚಿದ್ವಿಲಾಸ್ ಅವರು ಮಾತನಾಡಿ, ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ವರ್ತಕ ಸಮುದಾಯ ಆತಂಕಕ್ಕೆ ಒಳಗಾಗಿದೆ. ಈಗಾಗಲೇ ಜಿಲ್ಲಾಡಳಿತ ಕೊರೊನಾ ಪ್ರಕರಣಗಳ ಸಂಪರ್ಕ ಇರುವವರ ಪತ್ತೆಗಾಗಿ 5 ತಂಡಗಳನ್ನು ರಚಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಇದಕ್ಕೆ ಬೆಂಬಲವಾಗಿ ವರ್ತಕ ಸಮುದಾಯ ತನ್ನ ವ್ಯಾಪಾರ ವಹಿವಾಟುಗಳನ್ನು ಮಧ್ಯಾಹ್ನದ ನಂತರ ಸ್ಥಗಿತಗೊಳಿಸಿ ಸಹಕಾರ ನೀಡುವ ಅಗತ್ಯವಿದೆ ಎಂದು ತಿಳಿಸಿದರು.

ಪರಿಸ್ಥತಿಗೆ ಅನುಗುಣವಾಗಿ ಆಯಾ ಊರುಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ನಿಯಂತ್ರಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಚೇಂಬರ್‍ನ ಆಯಾ ಸ್ಥಾನೀಯ ಸಮಿತಿಗಳಿಗೆ

(ಮೊದಲ ಪುಟದಿಂದ) ಸಂಪೂರ್ಣ ಅಧಿಕಾರವನ್ನು ಜಿಲ್ಲಾ ಸಮಿತಿ ನೀಡಿದೆ ಎಂದÀರು. ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಅವರುಗಳು ಕೂಡಾ ಚೇಂಬರ್‍ನೊಂದಿಗೆ ಸಭೆ ನಡೆಸಿ ಸಹಕಾರ ಕೋರಿದ್ದಾರೆ; ಶಾಸಕ ಕೆ.ಜಿ. ಬೋಪಯ್ಯ ಅವರು ಚೇಂಬರ್ ನಿರ್ಣಯ ಕೈಗೊಳ್ಳುವದು ಸೂಕ್ತವೆಂದು ಸಲಹೆ ನೀಡಿದ್ದು, ಜನಪ್ರತಿನಿಧಿಗಳು, ವ್ಯಾಪಾರಸ್ಥರು, ವಾಣಿಜ್ಯೋದ್ಯಮಿ ಗಳೊಂದಿಗೆ ಚರ್ಚಿಸಿ ಚೇಂಬರ್ ಆಫ್ ಕಾಮರ್ಸ್ ಈ ನಿರ್ಧಾರಕ್ಕೆ ಬಂದಿದೆ ಎಂದು ಚಿದ್ವಿಲಾಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚೇಂಬರ್ ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್, ಖಜಾಂಚಿ ರವಿ ಉತ್ತಪ್ಪ, ರಾಜ್ಯ ಸಮಿತಿ ನಿರ್ದೇಶಕ ಗಿರೀಶ್ ಗಣಪತಿ ಹಾಗೂ ನಗರಾಧ್ಯಕ್ಷ ಅಧ್ಯಕ್ಷ ಬಿ.ಎಂ.ಧನಂಜಯ್ ಉಪಸ್ಥಿತರಿದ್ದರು.

ಸೋಮವಾರಪೇಟೆ 6 ರಿಂದ 2

ಸೋಮವಾರಪೇಟೆ: ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳನ್ನು ತಾ. 27ರಿಂದ (ಇಂದಿನಿಂದ) ಮುಂದಿನ ಒಂದು ವಾರಗಳ ಕಾಲ ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದ ಬಂದ್ ಮಾಡಲು ನಿರ್ಧರಿಸಲಾಗಿದೆ.

ಚೇಂಬರ್ ಆಫ್ ಕಾಮರ್ಸ್‍ನ ಸ್ಥಾನೀಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಸ್ವಯಂ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ 7 ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಸಮಿತಿಯ ಅಧ್ಯಕ್ಷ ಮನುಕುಮಾರ್ ರೈ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು.

ಸಂತೆ ದಿನವಾದ ಸೋಮವಾರದಂದು ಪಟ್ಟಣದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರನ್ನು ನಿಯಂತ್ರಿಸುವಂತೆ ತಹಶೀಲ್ದಾರ್‍ರಿಗೆ ಮನವಿ ಸಲ್ಲಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು. ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳಾದ ಜಯೇಶ್, ತಿಮ್ಮಶೆಟ್ಟಿ, ಜಯರಾಮ್, ಪ್ರಮೋದ್, ಸದಾನಂದ ಸೇೀರಿದಂತೆ ಇತರರು ಉಪಸ್ಥಿತರಿದ್ದರು. - ವಿಜಯ್

ಕೊಡ್ಲಿಪೇಟೆಯಲ್ಲಿ ಮಧ್ಯಾಹ್ನ 2ರಿಂದ ಬಂದ್

ಕೊಡ್ಲಿಪೇಟೆ: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿರುವದರಿಂದ ಮುಂಜಾಗ್ರತಾ ಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಪ್ರತಿದಿನ ಮಧ್ಯಾಹ್ನ 2 ಗಂಟೆಯ ನಂತರ ಬಂದ್ ಮಾಡಲು ಚೇಂಬರ್ ಆಫ್ ಕಾಮರ್ಸ್ ಸಭೆಯಲ್ಲಿ ತೀರ್ಮಾನಿಸಲಾಯಿತು. ಕೊಡ್ಲಿಪೇಟೆಯ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಹೋಬಳಿ ಅಧ್ಯಕ್ಷ ಹೆಚ್.ಎಸ್. ಯತೀಶ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಹೊಟೇಲ್, ಕ್ಯಾಂಟೀನ್, ಅಂಗಡಿ ಮಾಲೀಕರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಒಳಗೊಂಡಂತೆ ನಡೆದ ಸಭೆಯಲ್ಲಿ ಅನಿರ್ದಿಷ್ಟಾವಧಿಯವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸುವದು. ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂಪ್ರೇರಿತವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ತೀರ್ಮಾನಿಸಲಾಯಿತು. ಇದರೊಂದಿಗೆ ಭಾನುವಾರದಂದು ಪೂರ್ಣ ಪ್ರಮಾಣದಲ್ಲಿ ಬಂದ್ ಮಾಡುವಂತೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಪ್ರಮುಖರಾದ ದಿವಾಕರ್, ಬಿ.ಕೆ. ಯತೀಶ್, ಜಿ.ಆರ್. ಸುಬ್ರಮಣಿ, ವಹಾಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು. - ಧರ್ಮ

ಪೆÇನ್ನಂಪೇಟೆ ವ್ಯಾಪಾರ

ಪೊನ್ನಂಪೇಟೆ: ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ಹಾಗೂ ಆದಿತ್ಯವಾರ ಸಂಪೂರ್ಣ ಬಂದ್ ಮಾಡುವ ಬಗ್ಗೆ ಪೆÇನ್ನಂಪೇಟೆ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಚಿರಿಯಪಂಡ ಉಮೇಶ್ ಉತ್ತಪ್ಪನವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ವರ್ತಕರು ಮಾಸ್ಕ್ ಧರಿಸಿ ಹಾಗೂ ಸ್ಯಾನಿಟರೈಸ್ ಬಳಸಿ ವ್ಯಾಪಾರ - ವ್ಯವಹಾರ ನಡೆಸುವಂತೆ ಸೂಚಿಸಿದ್ದಾರೆ.

ಶನಿವಾರಸಂತೆ ಸಭೆ

ಶನಿವಾರಸಂತೆ: ಶನಿವಾರಸಂತೆ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸಭೆ ಕರೆದು, ಸಭೆಯಲ್ಲಿ ಇಂದಿನಿಂದ ಮುಂದಿನ 10 ದಿನದವರೆಗೆ ಪ್ರತಿದಿನ ಬೆಳಿಗ್ಗೆ 7ಗಂಟೆಯಿಂದ ಮಧ್ಯಾಹ್ನ 12ಗಂಟೆಯವರೆಗೆ ಮಾತ್ರ ಎಲ್ಲಾ ಅಂಗಡಿಗಳು ತೆರೆದಿರಲು ನಿರ್ಧರಿಸಲಾಯಿತು. 12 ಗಂಟೆಯ ನಂತರ ಎಲ್ಲಾ ವರ್ತಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ತೀರ್ಮಾನಿಸಲಾಯಿತು. ಅದರಂತೆ ಇಂದು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು.

ಚೆಟ್ಟಳ್ಳಿ ಸಮಯ ನಿಗಧಿ

ಚೆಟ್ಟಳ್ಳಿ: ಶನಿವಾರದಿಂದ ನಿತ್ಯವೂ ಬೆಳಿಗ್ಗೆ 6ರಿಂದ ಮದ್ಯಾಹ್ನ 2ರ ತನಕ ಮಾತ್ರ ಅಂಗಡಿಗಳನ್ನು ಮಳಿಗೆಯನ್ನು ತೆರೆಯುವಂತೆ ತೀರ್ಮಾನಿಸಲಾಗಿದೆ.ಕಳೆದ ಸಂಜೆ ಚೆಟ್ಟಳ್ಳಿಯ ಅಂಗಡಿ ಮಾಲೀಕರು ಸೇರಿ ವ್ಯಾಪಾರ ಸಮಯವನ್ನು ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರ ತನಕ ನಿಗಧಿಪಡಿಸಿದ್ದು ಮುಂದಿನ ಒಂದು ವಾರ ಇದೇ ಸಮಯವನ್ನು ಮುಂದುವರೆಸಿ ಮುಂದಿನ ದಿನಗಳಲ್ಲಿ ವ್ಯಾಪಾರದ ಸಮಯವನ್ನು ಬದಲಾಯಿಸುವದಾಗಿಯೂ ತೀರ್ಮಾನಿಸಲಾಗಿದೆ.

ಸುಂಟಿಕೊಪ್ಪ ನಿರ್ಧಾರ

ಸುಂಟಿಕೊಪ್ಪ : ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಮನವಿ ಮೇರೆಗೆ ಸುಂಟಿಕೊಪ್ಪ ಸ್ಥಾನೀಯ ಚೇಂಬರ್ ಆಫ್ ಕಾರ್ಮಸ್ ತಾ.27 ರಿಂದ ಜುಲೈ 4 ರವರೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ನಿರ್ಧಾರಿಸಿದೆ. ಜಿಲ್ಲಾ ಸಮಿತಿಯ ಆದೇಶದ ಮೇರೆ ಭಾನುವಾರ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಿದ್ದು ವ್ಯಾಪಾರಸ್ಥರು ಸಾರ್ವಜನಿಕರು ಸಹಕರಿಸುವಂತೆ ಸುಂಟಿಕೊಪ್ಪ ಸ್ಥಾನೀಯ ಚೇಂಬರ್ ಆಫ್ ಕಾರ್ಮಸ್ ಮನವಿ ಮಾಡಿದೆ.