ಕೂಡಿಗೆ, ಜೂ. 24: ಸರಕಾರವು ಹೈನುಗಾರಿಕೆಗೆ ಉತ್ತೇಜನ ನೀಡಲು ಹಾಲು ಉತ್ಪಾದಕ ಸದಸ್ಯರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬ್ಯಾಂಕ್ ಮೂಲಕ ಸಾಲ ಪಡೆಯಲು ಯೋಜನೆ ರೂಪಿಸಿದೆ. ಇದರ ಸದುಪಯೋಗವನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳು ಬಳಸಿಕೊಳ್ಳುವ ಮೂಲಕ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ. ಅವರು ಸಹಕಾರ ಸಂಘದ ಆವರಣದಲ್ಲಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಯಾವುದೇ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ನೋಂದಾಯಿಸಲು ಅರ್ಹರಾಗಿರುತ್ತಾರೆ. ಈಗಾಗಲೇ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರು ಹೈನುಗಾರಿಕೆಗೆ ಅಳವಡಿಸಿಕೊಂಡಲ್ಲಿ ಸಾಲದ ಮಿತಿ ರೂ. 3 ಲಕ್ಷದವರೆಗೆ ವಿಸ್ತರಿಸಬಹುದಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮೇಲಿನ ಬಡ್ಡಿಯಲ್ಲಿ ಕೇಂದ್ರ ಸರ್ಕಾರವು ಶೇ. 2 ಸಹಾಯಧನ ನೀಡುವುದರ ಜೊತೆಗೆ ಸಕಾಲದಲ್ಲಿ ಮರು ಪಾವತಿಸಿದಲ್ಲಿ ಹೆಚ್ಚುವರಿ ಶೇ. 3 ಪೆÇ್ರೀತ್ಸಾಹಧನ ನೀಡುವ ಸೌಲಭ್ಯಗಳು ಇವೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಬಡ್ಡಿರಹಿತ ಸಾಲವನ್ನಾಗಿ ಪಡೆಯು ಅವಕಾಶವಿದೆ. ಎಂದು ತಿಳಿಸಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸಂರ್ಪಕಿಸಬಹುದು ಎಂದು ತಿಳಿಸಿದ್ದಾರೆ.