ಸೋಮವಾರಪೇಟೆ, ಜೂ. 24: ಸಾಮೂಹಿಕವಾಗಿ ನಡೆಯುತ್ತಿದ್ದ ಯೋಗ ದಿನಾಚರಣೆ ಪ್ರಸಕ್ತ ವರ್ಷ ಕೋವಿಡ್-19 ಹಿನ್ನೆಲೆ ಆನ್‍ಲೈನ್ ಹಾಗೂ ಮನೆಗಳಲ್ಲಿ ನಡೆಯಿತು.
ಇಲ್ಲಿನ ಆರ್ಟ್ ಅಫ್ ಲಿವಿಂಗ್ ಸಂಸ್ಥೆಯ ಪದಾಧಿಕಾರಿಗಳು ಆನ್‍ಲೈನ್ ವೀಡಿಯೋ ಮೂಲಕ ಯೋಗ ದಿನಾಚರಣೆಯಲ್ಲಿ ಭಾಗಿಯಾದರು. ಶಿಕ್ಷಕಿ ರಾಗಿಣಿ ಅವರು ಶ್ಲೋಕ, ಯೋಗಾಸನ, ಪ್ರಾಣಾಯಾಮಗಳನ್ನು ತಿಳಿಸಿದರು. ಆಟ್ ಆಫ್ ಲಿವಿಂಗ್‍ನ ರಾಜ್ಯ ಶಿಕ್ಷಕರ ಸಂಯೋಜಕ ಡಾನ್ ರಾಜಪ್ಪ ಅವರು, ಧ್ಯಾನ, ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಿಂದ ಮಾನ್ಯತೆ ಪಡೆದ ಯೋಗ ಶಿಕ್ಷಕರಾದ ಬೀನಾ ಮೋಹನ್, ಡಿ. ಪ್ರಶಾಂತ್ ಸೇರಿದಂತೆ ಇತರರು ತಮ್ಮ ಮನೆಗಳಲ್ಲಿ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಯೋಗ ದಿನವನ್ನು ಆಚರಿಸಿದರು.