ಗುಡ್ಡೆಹೊಸೂರು, ಜೂ. 24: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ಮುನೇಶ್ವರ ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರು ಅಲ್ಲಿನ ಕುಡೆಕ್ಕಲ್ ಗುರುಪ್ರಸಾದ್ ಅವರ ಮನೆಯಲ್ಲಿ ಸಭೆ ಸೇರಿ ಇತ್ತೀಚೆಗೆ ಭಾರತ ಚೀನಾಗಡಿಯಲ್ಲಿ ಎರಡು ಸೇನೆಗಳ ನಡುವೆ ನಡೆದ ಕಲಹದಲ್ಲಿ ನಮ್ಮ ಸೇನೆಯ ಹುತಾತ್ಮರಾದ ಯೋಧರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಗಡಿಯಲ್ಲಿ ವೀರಮರಣ ಹೊಂದಿದ ಯೋಧರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಗೌರವ ಸಲ್ಲಿಸಲಾಯಿತು.

ದೇವಸ್ಥಾನ ಸಮಿತಿಯ ಗೌರವ ಅಧ್ಯಕ್ಷ ಕುಡೆಕ್ಕಲ್ ರಾಮಣ್ಣ, ಅಧ್ಯಕ್ಷ ಜಿ.ಎಂ. ಸಲಿ, ಬಟ್ಟುಮನೆ ರಮೇಶ್, ಗುರುಪ್ರಸಾದ್, ದಿವಾಕರ, ಬಾಲಕೃಷ್ಣ, ಹರೀಶ್, ಪ್ರಥ್ವೀ, ಪ್ರಕಾಶ್, ಕೆ.ಆರ್. ನಿತ್ಯಾನಂದ, ಜಿ. ಮನುಕುಮಾರ್, ಎ.ಟಿ. ಲೀಲಾವತಿ, ಗ್ರಾಮಸ್ಥರು ಹಾಜರಿದ್ದರು.