ಕೂಡಿಗೆ, ಜೂ. 24: ಹೆಬ್ಬಾಲೆಯಲ್ಲಿ ಪ್ರಾರಂಭಗೊಂಡಿರುವ ಕುಡಿಯುವ ನೀರಿನ ಸರಬರಾಜು ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ ಹೆಬ್ಬಾಲೆಯಿಂದ ಮುಳ್ಳುಸೋಗೆ ಗ್ರಾಮದವರೆಗೆ ಕುಡಿಯುವ ನೀರಿನ ಸರಬರಾಜು ಮಾಡುವ ವ್ಯವಸ್ಥೆಗೆ ಪೈಪ್‍ಗಳ ದುರಸ್ತಿ ಕೆಲಸ ನಡೆಯುತ್ತಿದೆ.
ಹೆಬ್ಬಾಲೆಯಲ್ಲಿ ಈಗಾಗಲೇ ಪ್ರಾರಂಭವಾಗಿರುವ ಬೃಹತ್ ಪ್ರಮಾಣದ ಕುಡಿಯುವ ನೀರಿನ ಸರಬ ರಾಜು ಯೋಜ ನೆಯು ಅನುಷ್ಟಾ ನಗೊಂಡು ಹತ್ತು ವರ್ಷಗಳು ಕಳೆದಿವೆ. ಆದರೆ ಹೆಬ್ಬಾಲೆಯಿಂದ ಮುಳ್ಳುಸೋಗೆವರೆಗೆ ನೀರಿನ ಸರಬರಾಜು ವ್ಯವಸ್ಥೆಗೆ ಸಂಬಂಧಿಸಿದಂತೆ ಅನೇಕ ತೊಂದರೆಗಳು ಆಗುತ್ತಿದ್ದವು. ರಸ್ತೆಯ ಅಗಲೀಕರಣದ ಸಂದರ್ಭ ನೀರನ್ನು ಸರಬರಾಜು ಮಾಡಲು ಅಳವಡಿಸಿದ್ದ ಬೃಹತ್ ಕಬ್ಬಿಣದ ಪೈಪ್‍ಗಳು ಹಾಳಾಗಿತ್ತು. ಇದರಿಂದಾಗಿ ನೀರು ಸಮರ್ಪಕವಾಗಿ ಮುಂದೆ ಸಾಗುತ್ತಿರಲಿಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿ ವರ್ಗದವರಿಂದ ಹಾಳಾಗಿರುವ ಪೈಪನ್ನು ಸರಿಪಡಿಸಿ ಕುಡಿಯುವ ನೀರನ್ನು ಒದಗಿಸಲು ಪ್ರಯತ್ನ ನಡೆಯುತ್ತಿದೆ. ಪೈಪ್‍ಗಳ ದುರಸ್ತಿಯೊಂದಿಗೆ ಆಯಾ ಗ್ರಾಮಗಳಲ್ಲಿ ನಿರ್ಮಿಸಲಾದ ದೊಡ್ಡ ಟ್ಯಾಂಕ್‍ಗಳಲ್ಲಿ ನೀರನ್ನು ಸಂಗ್ರಹಿಸಿ ನಂತರ ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿರುವ ಪೈಪ್‍ಗಳ ಮೂಲಕ ಆಯಾ ಗ್ರಾಮಗಳಿಗೆ ಹರಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ವಿರೇಂದ್ರ ಮಾಹಿತಿ ನೀಡಿದರು.