ಕೊಡಗು ಎಂದಾಕ್ಷಣ ನಮಗೆ ನೆನಪು ಬರುವುದು ಸೈನಿಕರ ನಾಡು, ಪ್ರವಾಸಿಗರ ಸ್ವರ್ಗ, ಹಾಗೂ ಕ್ರೀಡೆಯ ತವರೂರು ಎಂದು.
ಹೌದು ಪುಟ್ಟ ಜಿಲ್ಲೆಯಾಗಿದ್ದರೂ ಕಾವೇರಿ ತವರು ಕೊಡಗು ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿದೆ. ಕೊಡಗು ಜಿಲ್ಲೆಯ ಕ್ರೀಡಾಪಟುಗಳು ವಿವಿಧ ಕ್ರೀಡೆಯಲ್ಲಿ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಆದರೆ ಕೊಡಗು ಜಿಲ್ಲೆಯಿಂದ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಕೆಲವೇ ಕೆಲವು ಆಟಗಾರರನ್ನು ಮಾತ್ರ ಗುರುತಿಸುವ ಕೆಲಸವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪುಟ್ಟ ಜಿಲ್ಲೆ ಕೊಡಗಿನಿಂದ ಕಳೆದ ಹತ್ತು ವರ್ಷಗಳಿಂದ ಭಾರತ ತಂಡವನ್ನು ಹ್ಯಾಂಡ್‍ಬಾಲ್ ಕ್ರೀಡೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಕುಶಾಲನಗರದ ಗ್ರೀನಿಡ್ಜ್ ಡಿಕುನ್ಹಾರವರು.
ಕೊಡಗು ಜಿಲ್ಲೆಯಿಂದ ಹ್ಯಾಂಡ್‍ಬಾಲ್ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಆಟಗಾರ ಗ್ರೀನಿಡ್ಜ್ ಡಿಕುನ್ಹಾ ಕರ್ನಾಟಕದಿಂದ ಹ್ಯಾಂಡ್‍ಬಾಲ್‍ನಲ್ಲಿ ಭಾರತ ತಂಡದ ನಾಯಕರಾಗಿ ಗ್ರೀನಿಡ್ಜ್ ಡಿಕುನ್ಹಾ ಹಲವಾರು ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಕುಶಾಲನಗರದ ಪೀಟರ್ ಡಿಕುನ್ಹಾ ಹಾಗೂ ಸಲೀನಾ ಡಿಕುನ್ಹಾ ಅವರ ಮಗನಾಗಿ 1984 ಏಪ್ರಿಲ್ 20 ರಂದು ಜನಿಸಿದ ಗ್ರೀನಿಡ್ಜ್ ಡಿಕುನ್ಹಾರವರ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಕುಶಾಲನಗರದ ಫಾತಿಮಾ ಪ್ರೌಢ ಶಾಲೆಯಲ್ಲಿ ನಡೆಯಿತು. ಡಿಪೆÇ್ಲೀಮಾ ಆಟೋಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಗ್ರೀನಿಡ್ಜ್ ಡಿಕುನ್ಹಾ 2003ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು.
ಇವರು ಪ್ರಸ್ತುತ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಹೈದರಾಬಾದ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸತತ ಮೂರು ಬಾರಿ ಏಷ್ಯನ್ ಗೇಮ್ಸ್‍ನಲ್ಲಿ ಎರಡು ಬಾರಿ ಭಾರತದ ನಾಯಕ ಸ್ಥಾನ ಗ್ರೀನಿಡ್ಜ್ ಡಿಕುನ್ಹಾರವರು ಸತತ ಮೂರು ಬಾರಿ ಏಷ್ಯನ್ ಗೇಮ್ಸ್‍ನಲ್ಲಿ ಭಾರತದ ಹ್ಯಾಂಡ್‍ಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದರು. 2010, 2014, 2018 ರಲ್ಲಿ ಸತತ ಮೂರು ಏಷ್ಯನ್ ಗೇಮ್ಸ್ ಹ್ಯಾಂಡ್‍ಬಾಲ್‍ನಲ್ಲಿ ಆಡಿದ್ದ ಇವರು 2014 ಹಾಗೂ 2018 ರಲ್ಲಿ ಹ್ಯಾಂಡ್‍ಬಾಲ್ ತಂಡದ ನಾಯಕರಾಗಿದ್ದರು. ಬೀಚ್ ಹ್ಯಾಂಡ್‍ಬಾಲ್, ಎರಡು ಬಾರಿ ಚಾಂಪಿಯನ್ ಶಿಪ್, ಮೂರು ಬಾರಿ ಲೀಗ್ ಹ್ಯಾಂಡ್‍ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. 2010ರಿಂದ 2019ರವರೆಗೆ ಭಾರತ ಹ್ಯಾಂಡ್‍ಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2007 ರಿಂದ 2019ರವರೆಗೆ ಸತತವಾಗಿ ಓಪನ್ ನ್ಯಾಷನಲ್ ಹ್ಯಾಂಡ್‍ಬಾಲ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಓಪನ್ ನ್ಯಾಷನಲ್ ಹ್ಯಾಂಡ್‍ಬಾಲ್‍ನಲ್ಲಿ 11 ಸ್ವರ್ಣ ಪದಕ ವಿಜೇತರಾಗಿದ್ದಾರೆ.
ಕಳೆದ ಹದಿಮೂರು ವರ್ಷಗಳಿಂದ ಸತತವಾಗಿ ಹ್ಯಾಂಡ್‍ಬಾಲ್‍ನಲ್ಲಿ ಓಪನ್ ನ್ಯಾಷನಲ್‍ನಲ್ಲಿ ಭಾಗವಹಿಸುತ್ತಿರುವ ಗ್ರೀನಿಡ್ಜ್ ಡಿಕುನ್ಹಾ 11 ಬಾರಿ ಸ್ವರ್ಣ ಪದಕ ಹಾಗೂ ತಲಾ ಒಂದು ಬಾರಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಹನ್ನೆರಡು ಬಾರಿ ರಾಷ್ಟ್ರಮಟ್ಟದಲ್ಲಿ ಹಾಗೂ ಹದಿನೈದು ಬಾರಿ ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ಗ್ರೀನಿಡ್ಜ್ ಡಿಕುನ್ಹಾ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕೂಡ ಭಾಗವಹಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿದ್ದಾರೆ. ಇಂತಹ ಪ್ರತಿಭೆಗಳನ್ನು ಕೊಡಗು ಜಿಲ್ಲೆ ಹಾಗೂ ರಾಜ್ಯ ಸರ್ಕಾರದ ಗುರುತಿಸಿ ಇನ್ನಷ್ಟು ಪ್ರೋತ್ಸಾಹ ನೀಡಬೇಕಾಗಿದೆ.
2014ರಲ್ಲಿ ಕೊರಿಯಾ ಹಾಗೂ 2018ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ ಹ್ಯಾಂಡ್‍ಬಾಲ್‍ನಲ್ಲಿ ಕೊಡಗಿನ ಕುವರ ಗ್ರೀನಿಡ್ಜ್ ಡಿಕುನ್ಹಾ ಭಾರತದ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಪ್ರೌಢ ಶಾಲಾ ಮಟ್ಟದಲ್ಲಿ ಕಬಡ್ಡಿ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಇವರು ಕರ್ನಾಟಕದ ಪರವಾಗಿ ಒಂದು ಬಾರಿ ಕಬಡ್ಡಿ ಕ್ರೀಡೆಯಲ್ಲಿ ಭಾಗವಹಿಸಿದ್ದರು. ಜ್ಞಾನ ಭಾರತಿ ಸ್ಫೋಟ್ರ್ಸ್ ಕ್ಲಬ್ ಪರವಾಗಿ ಕಬಡ್ಡಿ ಕ್ರೀಡೆಯಲ್ಲಿ ಆಡಿದ ಅನುಭವ ಹೊಂದಿದ್ದಾರೆ.
- ಕೆ. ಎಂ. ಇಸ್ಮಾಯಿಲ್,
ಕಂಡಕರೆ.