ಸುಂಟಿಕೊಪ್ಪ, ಜೂ. 24: 7ನೇ ಹೊಸಕೋಟೆಯಲ್ಲಿ 2ನೇ ವರ್ಷದ ರಕ್ತದಾನ ಶಿಬಿರವನ್ನು ಕೊಡಗು ಬ್ಲಡ್ ಡೋನರ್ಸ್ ಮಡಿಕೇರಿ ಮತ್ತು ಸೇವ್ ಲೈಫ್ಸ್ ಫೌಂಡೇಷನ್ 7ನೇ ಹೊಸಕೋಟೆ ಇನ್ಸಾನಿಯ ಟ್ರಸ್ಟ್ ಜಂಟಿ ಆಶ್ರಯದಲ್ಲಿ ತಾ 17ರಂದು ಏರ್ಪಡಿಸಲಾಯಿತು.

ಈ ಸಂದರ್ಭ ಮಡಿಕೇರಿ ಬ್ಲಡ್ ಬ್ಯಾಂಕಿನ ಡಾ. ರವಿ ಕರುಂಬಯ್ಯ ಮಾತನಾಡಿ, ಇಂದಿನ ಯುವಕರು ಇಂತಹ ಬ್ಲಡ್ ಬ್ಯಾಂಕಿಗೆ ರಕ್ತದಾನ ಮಾಡುವುದರಿಂದ ಆರೋಗ್ಯ ಸಮಸ್ಯೆಯನ್ನು ಹೋಗಲಾಡಿಸ ಬಹುದು. ಕೊಡಗಿನಲ್ಲಿ ಅನೇಕ ಸಂಘ ಸಂಸ್ಥೆಗಳು ಇಂತಹ ಕಾರ್ಯವನ್ನು ನಡೆಸುತ್ತಿದ್ದು ಸಂತೋಷದ ವಿಷಯ ಎಂದರು. ಯೂತ್ ಕಮಿಟಿ ಸಂಸ್ಥಾಪಕ ಖಲೀಲ್ ಮಾತನಾಡಿ, ಅಧುನಿಕ ಜಗತ್ತಿನಲ್ಲಿ ಎಲ್ಲವನ್ನೂ ಕೃತಕವಾಗಿ ಮಾಡ ಬಹುದು. ಆದರೆ ರಕ್ತಕ್ಕೆ ರಕ್ತವೇ ಸಾಟಿ ಎಂದರು. 7ನೇ ಹೊಸಕೋಟೆ ಗ್ರಾ.ಪಂ. ಉಪಾಧ್ಯಕ್ಷ ಮುಸ್ತಾಫ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಅಧ್ಯಕ್ಷ ವಿನು ಇನ್ಸಾನಿಯ 7ನೇ ಹೊಸಕೋಟೆ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ಸಭೀರ್, ಸೇವ್ ಲೈಫ್ಸ್ ಫೌಂಡೇಷನ್ ಕಾರ್ಯದರ್ಶಿ ರವಿಚಂದ್ರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಪಂಚಾಯಿತಿ ಅಭಿವೃಧ್ಧಿ ಅಧಿ ಕಾರಿ ರವೀಶ್, ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಿಬಿರದಲ್ಲಿ 7ನೇ ಹೊಸಕೋಟೆ ಹಲವು ಯುವ ಕರು ರಕ್ತದಾನ ಮಾಡಿದರು. ರಕ್ತದಾನ ಮಾಡಿ ದವರಿಗೆ ಸುಂಟಿ ಕೊಪ್ಪದ ವರ್ತಕ ಅನಿಲ್ ಗೌಡ ಹಣ್ಣು-ಹಂಪಲು ವಿತರಿಸಿದರು.