ಮಡಿಕೇರಿ, ಜೂ. 24: ಜಿಲ್ಲೆಯಲ್ಲಿ ತಾ. 25ರಿಂದ (ಇಂದಿನಿಂದ) ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‍ಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ನಿರ್ಭಯದಿಂದ ಬರೆಯುವುದರೊಂದಿಗೆ ಉತ್ತಮ ಸಾಧನೆ ತೋರುವಂತೆ ಈ ಸಂದರ್ಭ ಸುನಿಲ್ ಸುಬ್ರಮಣಿ ಹಾರೈಸಿದರು.

ಮೇಲ್ಮನೆ ಸದಸ್ಯರೊಂದಿಗೆ ಬಿಜೆಪಿ ಪ್ರಮುಖರಾದ ಮನುಮಂಜುನಾಥ್, ಬಿ.ಕೆ. ಜಗದೀಶ್, ಸತೀಶ್, ಉಮೇಶ್ ಸುಬ್ರಮಣಿ, ಅನಿತಾ ಪೂವಯ್ಯ, ಸವಿತಾ ರಾಕೇಶ್, ನವೀನ್ ಪೂಜಾರಿ ಮೊದಲಾದವರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್‍ಗಳನ್ನು ಹಂಚಿದ್ದು, ಪಕ್ಷದಿಂದ ಜಿಲ್ಲೆಯಾದ್ಯಂತ 10,000 ಮಾಸ್ಕ್ ಹಂಚಿಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.