ಮಡಿಕೇರಿ, ಜೂ. 21: ಈತನ ಬಳಿ ವಿದ್ಯಾಭ್ಯಾಸವಿದೆ, ಉತ್ತಮ ಹಾಕಿಪಟು ರಾಜ್ಯ ಮಟ್ಟದಲ್ಲೂ ಹೆಸರು ಮಾಡಿದವನು, ಸೇನೆಗೆ ಸೇರಿ ದೇಶ ಸೇವೆ ಮಾಡುವುದಕ್ಕೂ ಮುಂದಾದ ಆದರೆ ಇವನಿಗೆ ಕೊನೆಗೆ ಕೈ ಹಿಡಿದಿದ್ದು ಉರಗ ತಜ್ಞ ಪಟ್ಟ. ಹೌದು ಇದು ಪ್ರಜ್ವಲ್ ಗೌಡ ಎನ್ನುವ ಯುವಕನ ಯಶೋಗಾಥೆ.
ಮೂಲತಃ ಮೂರ್ನಾಡು ಗ್ರಾಮದವನಾದ ಈತನ ವಯಸ್ಸು 21,ವೇದಾವತಿ ಮತ್ತು ಚಂದ್ರಶೇಖರ್ ಅವರ ಪುತ್ರನಾಗಿರುವ ಈತ ಮಡಿಕೇರಿಯ ಫೀಲ್ಡ್ ಮಾಷರ್Àಲ್ ಕಾರ್ಯಪ್ಪ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಅನಿವಾರ್ಯವಾಗಿ ಅರ್ಧದಲ್ಲೇ ಮೊಟಕುಗೊಳಿಸಿದ ಕಾಲೇಜು ಮಟ್ಟದಲ್ಲೇ ಹಾಕಿ ಕ್ರೀಡೆಯಲ್ಲಿ ಉತ್ತಮ ಹೆಸರು ಮಾಡಿರುವ ಪ್ರಜ್ವಲ್ ಕಾಲೇಜು ಪರವಾಗಿ ರಾಜ್ಯಮಟ್ಟದಲ್ಲೂ ಹೆಸರು ಮಾಡಿದ್ದಾನೆ. ಇನ್ನು ವಿದ್ಯೆ ಸರಿಯಾಗಿ ತಲೆಗೆ ಹತ್ತದಿದ್ದಾಗ ಪ್ರತಿಯೊಂದು ಸೇನಾ ನೇಮಕಾತಿ ಕ್ಯಾಂಪ್ ನಲ್ಲಿ ಭಾಗವಹಿಸಿದ್ದ ,ಪ್ರತಿಯೊಂದು ಪರೀಕ್ಷೆಯಲ್ಲಿ ಅರ್ಹತೆ ಪಡೆದರೂ ತನ್ನ ಎತ್ತರ ಮಾತ್ರ ಈತನಿಗೆ ಮುಳುವಾಗಿದೆ.
ಉರಗ ತಜ್ಞನಾದ : ಕಾಲೇಜಿನಲ್ಲಿ ಒಂದಷ್ಟು ಪೇಪರ್ ಬಾಕಿ ಇರುವುದರಿಂದ ಮನೆಯಲ್ಲೇ ಉಳಿದುಕೊಂಡ ಪ್ರಜ್ವಲ್ ಮನೆ ಸಮೀಪದ ಪಟ್ಟಣದ ಕಂಪ್ಯೂಟರ್ ತರಬೇತಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡ,ಸ್ನೇಹಿತರ ಸಂಸ್ಥೆಯಾಗಿದ್ದರಿಂದ ಒಂದಷ್ಟು ಕಂಪ್ಯೂಟರ್ ಜ್ಞಾನ ಇದ್ದ ಕಾರಣ ವಿದ್ಯಾರ್ಥಿಗಳಿಗೆ ಸಹಾಯ ಮಾಡ ತೊಡಗಿದ್ದ ಇಂತಹ ಸಂದರ್ಭದಲ್ಲಿ ಮನೆಯ ಸಮೀಪದ ವಿಷಕಾರಿ ಹಾವೊಂದು ಪ್ರತ್ಯಕ್ಷವಾದ ಹಿನ್ನೆಲೆ ತಕ್ಷಣ ರಕ್ಷಿಸಿ ಕಾಡಿಗೆ ಬಿಟ್ಟ ಈ ಧೀರ ಪ್ರಜ್ವಲ್ ಅಲ್ಲಿಂದ ಶುರುವಾಯಿತು ಈತನ ಹಾವಿನ ಪ್ರೇಮ. ಅಂದಿನಿಂದ ಇಲ್ಲಿವರೆಗೆ ಬರೋಬ್ಬರಿ 60 ವಿಷಕಾರಿ ಹಾವುಗಳನ್ನು ಹಿಡಿದಿದ್ದು, ಹಿಡಿದ ನಂತರ ಅರಣ್ಯ ಇಲಾಖೆಯ ಸಹಾಯದಿಂದ ಅರಣ್ಯಕ್ಕೆ ಬಿಡಲಾಗುತ್ತಿದೆ.ಯಾವುದೇ ಗುರುವಿಲ್ಲದೆ ಕೇವಲ ಹಾವು ಹಿಡಿಯುವ ಸ್ಟಿಕ್ ಅನ್ನು ತಾನೇ ತಯಾರಿಸಿ ಈ ನಿಸ್ವಾರ್ಥ ಸೇವೆ ತೊಡಗಿಸಿಕೊಳ್ಳುತ್ತಿದ್ದಾನೆ, ಮುಂದಿನ ದಿನದಲ್ಲಿ ಅರಣ್ಯ ಇಲಾಖೆಗೆ ಸೇರಬೇಕೆನ್ನುವ ಉದ್ದೇಶವನ್ನೂ ಇಟ್ಟುಕೊಂಡಿದ್ದಾನೆ.ಏನೇ ಆಗಲಿ ಈತನ ಕನಸ್ಸು ನನಸಾಗಲಿ ಎಂದು ಹಾರೈಸೋಣ.
- ಗಿರಿಧರ್ ಕೊಂಪುಳೀರ