ಚೆಟ್ಟಳ್ಳಿ, ಜೂ. 22: ಕರ್ನಾಟಕ, ಯು.ಎ.ಇ ಹಾಗೂ ಎಸ್.ಕೆ.ಎಸ್.ಎಸ್.ಎಫ್ , ಜಿ.ಸಿ.ಸಿ ಕೊಡಗು ಘಟಕದ ಸಹಭಾಗಿತ್ವದಲ್ಲಿ, ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಗಲ್ಫ್ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ ಸಲುವಾಗಿ
‘ಮರಳಿ ಗೂಡಿಗೆ ಸಾಂತ್ವನ’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ. ಇದರ ಮೊದಲ ಭಾಗವಾಗಿ ಯು.ಎ.ಇ ಯಿಂದ ಎಸ್.ಕೆ.ಎಸ್.ಎಸ್.ಎಫ್ ಸಹಯೋಗದೊಂದಿಗೆ ವಿಮಾನವು ಶೀಘ್ರವೇ ಮಂಗಳೂರಿಗೆ ಪ್ರಯಾಣ ಮಾಡಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿ.ಸಿ.ಸಿ ಘಟಕದ ಅಧ್ಯಕ್ಷರಾದ ಹುಸೈನ್ ಫೈಝಿ ತಿಳಿಸಿದ್ದಾರೆ.
ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿದವರನ್ನು ಮಾತ್ರ ಪರಿಗಣನೆ ಮಾಡಲಾಗುವುದಾಗಿದೆ. ಇಂಡಿಯನ್ ಕಾನ್ಸುಲೇಟ್ ಸೈಟ್ ನಲ್ಲಿ ರಿಜಿಸ್ಟರ್ ಮಾಡದವರನ್ನು ಪರಿಗಣಿಸುವುದಿಲ್ಲ ಎಂದು ಹುಸೈನ್ ಫೈಝಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ. +971 55 949 8960,+971543454684,+971565063450