ಮಡಿಕೇರಿ, ಜೂ. 21: ಎಸ್‍ಡಿಪಿಐ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಎಚ್. ಅಬೂಬಕರ್ ಪಕ್ಷದ ಧ್ವಜಾರೋಹಣ ಮಾಡಿದರು. ಭಾರತ ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.ನಂತರ ತ್ಯಾಗರಾಜನಗರದಲ್ಲಿರುವ ವೃದ್ಧಾಶ್ರಮಗಳಾದ ತನಲ್ ಹಾಗೂ ಶ್ರೀಶಕ್ತಿ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿರುವಂತಹ ನಿರಾಶ್ರಿತರಿಗೆ ಕಂಬಳಿಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ಪೀಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕರ್ ಹಾಗೂ ನಗರದ ನಗರ ಸಮಿತಿ ಸದಸ್ಯರಾದ ಬಶೀರ್ ಉಮ್ಮರ್ ಇಬ್ರಾಹಿಂ (ಮೊದಲ ಪುಟದಿಂದ) ಹಾಗೂ ಇತರರು ಇದ್ದರು . ಅದೇ ರೀತಿ ಪಕ್ಷದ ಎಮ್ಮೆಮಾಡು, ಕೊಂಡಂಗೇರಿ, ನಾಪೆÇೀಕ್ಲು, ಸಿದ್ದಾಪುರ ಹೊಸ್ತೋಟ, ಕುಶಾಲನಗರ ಸುಂಟಿಕೊಪ್ಪ ಮುಂತಾದ ಕಡೆಗಳಲ್ಲಿ ಸಂಸ್ಥಾಪನಾ ದಿನವನ್ನು ಆಚರಣೆ ಮಾಡಲಾಯಿತು.