ವೀರಾಜಪೇಟೆ, ಜೂ. 21: ಸಾರ್ವಜನಿಕರು ತಾವಾಗಿಯೇ ಕೊರೊನದ ಬಗ್ಗೆ ಜಾಗೃತಿ ವಹಿಸಿ ನಿಯಮ ಪಾಲನೆ ಮಾಡಬೇಕು. ಕೊಡಗಿನಲ್ಲಿ ಕೊರೊನಾ ಭೀತಿ ಸದ್ಯಕ್ಕೆ ದೂರವಾಗಿದ್ದರೂ ಜನರು ಸ್ವಯಂಪ್ರೇರಣೆಯಿಂದ ಜಾಗೃತರಾಗಿರಬೇಕು. ಸರಕಾರ ಕಾಲ ಕಾಲಕ್ಕೆ ರೂಪಿಸುವ ನಿಯಮಗಳನ್ನು ತಪ್ಪದೆ ಪಾಲಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸವಿತಾ ಸಮಾಜದವರಿಗೆ ಸರಕಾರದಿಂದ ಒದಗಿಸಲಾಗಿರುವ ಆಹಾರ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ನಂದೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಜಿ.ಪಂ. ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ ಹಾಗೂ ಮೂಕೊಂಡ ಶಶಿ ಸುಬ್ರಮಣಿ, ¥ಟ್ಟಣ ಪಂಚಾಯಿತಿ ಸದಸ್ಯರುಗಳು, ಸವಿತಾ ಸಮಾಜದ ಅಧ್ಯಕ್ಷ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.