ಶ್ರೀಮಂಗಲ, ಜೂ. 22 : ಕುಟ್ಟ ಕ್ಷೇತ್ರದ ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ ಅವರು ಐ. ಸಂಜು ಅವರ ಮೇಲೆ ಹಲ್ಲೆಮಾಡಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಸುಳ್ಳು ದೂರಿನಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು, ಕೂಡಲೇ ಕೈಬಿಡಬೇಕು, ಅಲ್ಲದೇ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸಿನಡಿ ಪ್ರಕರಣ ದಾಖಲಿಸುವ ಮೂಲಕ ಪೆÇಲೀಸ್ ಇಲಾಖೆಯಿಂದ ದೌರ್ಜನ್ಯ ನಡೆಸಲಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ಕಾಂಗ್ರೆಸ್ ಪಕ್ಷದಿಂದ ಶ್ರೀಮಂಗಲದಲ್ಲಿ ಪ್ರತಿಭಟನೆ ನಡೆಯಿತು.

ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾತನಾಡಿ ನ್ಯಾಯಾಲಯದ ಆದೇಶದಂತೆ ಉಭಯಕಡೆ ದೂರು ನೀಡಿದರೆ ದಾಖಲಿಸಿಕೊಳ್ಳಬೇಕೆಂದು ಇದ್ದರೂ, ವಾಸ್ತವಾಂಶವನ್ನು ಅರಿಯದೆ ಹಲ್ಲೆಗೊಳಗಾದ ತಾ.ಪಂ. ಸದಸ್ಯನ ವಿರುದ್ದವೇ ಸುಳ್ಳು ದೂರಿನಡಿ ಪ್ರಕರಣ ದಾಖಲಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೇಳಿದರು.

ಪೆÇಲೀಸರು ಸ್ವತಂತ್ರ್ಯವಾಗಿ ಕಾನೂನಿನಡಿ ಕಾರ್ಯ ನಿರ್ವಹಿಸ ಬೇಕು. ಆಡಳಿತ ಪಕ್ಷದ ಒತ್ತಡಕ್ಕೆ ಮಣಿಯಬಾರದು. ಇದರಿಂದ ಪೆÇಲೀಸರು ಮುಜುಗರವನ್ನು ಎದುರಿಸುವಂತಾಗುತ್ತದೆ. ತಾ.ಪಂ. ಸದಸ್ಯ ಅಲ್ಲದೇ ಬೆಮ್ಮತ್ತಿಯಲ್ಲಿ ಬಾಪು ಅವರ ಮೇಲೆ ದಾಖಲಿಸಿದ ಪ್ರಕರಣವನ್ನು ಪೆÇಲೀಸರು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಮುಖ್ಯಮಂತ್ರಿ, ಗೃಹಸಚಿವರು ಮತ್ತು ವಿರೋಧ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಅವರು ಮಾತನಾಡಿ, ಒಬ್ಬ ಚುನಾಯಿತ ಜನಪ್ರತಿನಿಧಿಯ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದು, ಯಾವುದೇ ಚಿಂತನೆ ಮಾಡದೆ ಪೆÇಲೀಸ್ ಇಲಾಖೆ ಈ ರೀತಿ ಪ್ರಕರಣ ದಾಖಲಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜಿ.ಪಂ. ಸದಸ್ಯ ಶಿವು ಮಾದಪ್ಪ ಅವರು ಮಾತನಾಡಿ ಹಣಕಾಸು ವ್ಯವಹಾರ ಇತ್ಯಾರ್ಥ ಪಡಿಸುವ ಸಂದರ್ಭ ತಾ.ಪಂ. ಸದಸ್ಯನ ಮೇಲೆ ಹಿಂಬದಿಯಿಂದ ಹಲ್ಲೆ ನಡೆದಿದೆ. ಈ ಸಂದರ್ಭ ಚಿಕಿತ್ಸೆ ಪಡೆದು ಆರೋಪಿ ಮೇಲೆ ತಾ.ಪಂ. ಸದಸ್ಯರು ದೂರು ನೀಡಿದ್ದು, ಪೆÇಲೀಸರು ಅದಕ್ಕೆ ಸೂಕ್ತವಾಗಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುವುದು ಸರಿಯಾದ ಕ್ರಮ. ಆದರೆ ನಂತರ ಹಲ್ಲೆಗೊಳಗಾದ ತಾ.ಪಂ. ಸದಸ್ಯನ ಮೇಲೆಯೇ ಮರುದಿನ ಕ್ರಿಮಿನಲ್ ಕೇಸ್ ದಾಖಲಿಸಿರುವುದು ಯಾರದೋ ಒತ್ತಡಕ್ಕೆ ಮಣಿದು ಪೆÇಲೀಸ್ ಇಲಾಖೆ ನಡೆದುಕೊಂಡಿದೆ ಎಂದು ಗೊತ್ತಾಗುತ್ತದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್ ಮಾತನಾಡಿ ಈ ಪ್ರಕರಣದಲ್ಲಿ ಸತ್ಯ ಗೊತ್ತಿದ್ದರೂ ಸಹ ಕಾನೂನು ನೆಪವೊಡ್ಡಿ ಪ್ರಕರಣ ದಾಖಲಿಸಿರುವುದು ಪೆÇಲೀಸ್ ಇಲಾಖೆಯಿಂದ ಆಗಿರುವ ದೌರ್ಜನ್ಯ ವಾಗಿದೆ. ಇದು ಕಾನೂನನ್ನು ಇಲಾಖೆಯೇ ದುರುಪಯೋಗ ಮಾಡಿಕೊಂಡಂತಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಕಿಸಾನ್ ಮೋರ್ಚದ ಅಧ್ಯಕ್ಷ ನೆರವಂಡ ಉಮೇಶ್ ಮಾತನಾಡಿ ಕಾಂಗ್ರೇಸ್ ಕಾರ್ಯಕರ್ತ ರನ್ನುಮಾನಸಿಕವಾಗಿ ಕುಗ್ಗಿಸಲು ಪ್ರಯತ್ನ ನಡೆದಿದೆ. ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಬರುವ ದೂರಿನ ಸತ್ಯಾಸತ್ಯತೆ ಅರಿಯದೇ ಕ್ರಿಮಿನಲ್ ಪ್ರಕರಣ ದಾಖಲಿಸುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಕಿಡಿಕಾರಿದರು.

ಈ ಸಂದರ್ಭ ವೀರಾಜಪೇಟೆ ತಾಲೂಕು ಡಿವೈಎಸ್ಪಿ ಜಯಕುಮಾರ್ ಅವರ ಮೂಲಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಜಯಕುಮಾರ್ ಅವರು ತಪ್ಪು ಅಥವಾ ಸತ್ಯದ ಬಗ್ಗೆ ತನಿಖೆ ಮಾಡಿದ ಮೇಲೆ ಗೊತ್ತಾಗಲಿದೆ. ನ್ಯಾಯಾಲಯದ ಆದೇಶದಂತೆ ಎರಡು ಕಡೆ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿದ್ದೇವೆ. ಈ ಪ್ರಕರಣ ನಿಷ್ಪ್ಪಕ್ಷಪಾತವಾಗಿ ಬೇರೆ ಅಧಿಕಾರಿಗಳಿಂದ ತನಿಖೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಪ್ರತಿಭಟನೆಯ ಆರಂಭದಲ್ಲಿ ಚೀನಾದ ಸೇನೆಯಿಂದ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಪೆÇನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಜಿ.ಪಂ. ಬಿ.ಎನ್. ಪೃಥ್ಯು, ಶ್ರೀಜಾ ಸಾಜಿ ಅಚ್ಚುತ್ತನ್, ಪಂಕಜ, ಡಿಸಿಸಿ ಕಾರ್ಯದರ್ಶಿ ರಶೀದ್ ಬೇಗೂರು, ಟಾಟು ಮೊಣ್ಣಪ್ಪ, ಧರ್ಮಜ ಉತ್ತಪ್ಪ, ಡಿಸಿಸಿ ಉಪಾಧ್ಯಕ್ಷ ಹೆಚ್.ಎ. ಹಂಸ, ಪೆÇನ್ನಂಪೇಟೆ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಲೀರ ರಶೀದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೊಳೇರ ಯಮುನಾ, ವೀರಾಜಪೇಟೆ ಬ್ಲಾಕ್ ಮಹಿಳಾ ಅಧ್ಯಕ್ಷೆ ತೋರೆರ ಪೆÇನ್ನಕ್ಕಿ, ನಗರಾಧ್ಯಕ್ಷೆ ದಿವ್ಯ, ಪಕ್ಷದ ಮುಖಂಡರಾದ ವಾಸು ಕುಟ್ಟಪ್ಪ, ಕೆ.ಎಂ. ಬಾಲಕೃಷ್ಣ, ಅಪ್ಪಚಂಗಡ ಮೋಟಯ್ಯ, ಕೊಲ್ಲೀರ ಬೋಪಣ್ಣ, ಕಡೇಮಾಡ ಕುಸುಮ, ಹೆಚ್.ವೈ. ರಾಮಕೃಷ್ಣ, ಮುಕ್ಕಾಟೀರ ಸಂದೀಪ್, ರಾಮನಾಥ್, ಅಜ್ಜಿಕುಟ್ಟೀರ ಕಾರ್ಯಪ್ಪ, ಚೊಟ್ಟೆಯಂಡಮಾಡ ವಿಶು, ಅಣ್ಣಮಾಳಮಾಡ ಲಾಲ ಅಪ್ಪಣ್ಣ ಮತ್ತಿತರರು ಪಾಲ್ಗೊಂಡಿದ್ದರು. ಕುಟ್ಟ ವೃತ್ತ ನಿರೀಕ್ಷಕ ಪ್ರಬಾರ ಎನ್.ಎನ್. ರಾಮಿರೆಡ್ಡಿ, ಕುಟ್ಟ ಎಸ್.ಐ. ಚಂದ್ರಯ್ಯ, ಗೋಣಿಕೊಪ್ಪ ಎಸ್.ಐ. ಸುರೇಶ್ ಬೋಪಣ್ಣ, ಪೆÇನ್ನಂಪೇಟೆ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಿದರು.

ಬಂಧನಕ್ಕೆ ಆಗ್ರಹ

ಚೆಟ್ಟಳ್ಳಿ: ಕುಟ್ಟ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯ ಪÀಲ್ವಿನ್ ಪೂಣಚ್ಚ ಅವರಿಗೆ ಕ್ಷುಲ್ಲಕ ಕಾರಣಕ್ಕಾಗಿ ಸಂಜು ಎಂಬಾತ ಮಾರಣಾಂತಿಕ ಹಲ್ಲೆ ಮಾಡಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ಚೆಟ್ಟಳ್ಳಿ ಕಾಂಗ್ರೆಸ್ ಸಮಿತಿ ಆಗ್ರÀಹಿಸಿದೆ.

*ವೀರಾಜಪೇಟೆ ತಾಲೂಕು ಪಂಚಾಯತ್ ಸದಸ್ಯರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ತಾಲೂಕು ಸಂಯೋಜಕ ಪಲ್ವಿನ್ ಪೂಣಚ್ಚ ಅವರ ಮೇಲೆÉ ಹಲ್ಲೆ ನಡೆಸಿ ಕೊಲೆ ಪ್ರಯತ್ನ ಮಾಡಿದ್ದು, ಜನಪ್ರತಿನಿಧಿಯೊಬ್ಬರ ಮೇಲೆ ನಡೆದ ಈ ಕೃತ್ಯವನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.

ಹಲ್ಲೆ ನಡೆಸಿದಾತನನ್ನು ಬಂಧಿಸಬೇಕು ಹಾಗೂ ಪಲ್ವಿನ್ ಪೂಣಚ್ಚ ಅವರ ಮೇಲೆ ದಾಖಲಿಸಿರುವ ಸುಳ್ಳು ಕೇಸನ್ನು ತಕ್ಷಣ ರದ್ದುಪಡಿಸಬೇಕೆಂದು ಸಂಘಟನೆ ಒತ್ತಾಯಿಸಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಎಚ್ಚರಿಸಿದ್ದಾರೆ.