ಮಡಿಕೇರಿ, ಜೂ. 21: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕ ಸುಧಾಕರ್ ಅವರಿಗೆ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯೊಂದಿಗೆ ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ಕಳೆದ ವಾರ ಮಡಿಕೇರಿಯಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಸರಕಾರಿ ಬಸ್‍ನಲ್ಲಿ ಕರೆದೊಯ್ದಿದ್ದ ಅವರು, ರಾತ್ರಿ ‘ಸ್ಯಾಟ್‍ಲೈಟ್’ ನಿಲ್ದಾಣದ ಅತಿಥಿ ಗೃಹದಲ್ಲಿ ತಂಗಿದ್ದು, ಆ ದಿನ ಬೆಳಗಿನ ಜಾವ ನಿದ್ದೆಗಣ್ಣಿನಲ್ಲಿ ಮೂತ್ರ ವಿಸರ್ಜನೆಗೆ ತೆರಳುವ ವೇಳೆ, ಅತಿಥಿ ಗೃಹದ ಕಿಟಕಿ ಮೂಲಕ ಆಕಸ್ಮಿಕವಾಗಿ ಆಯತಪ್ಪಿ 20 ಅಡಿಗಳಷ್ಟು ಕೆಳಗೆ ಬಿದ್ದು, ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಈ ಆಕಸ್ಮಿಕ ಘಟನೆಯಿಂದ ಮಾರಣಾಂತಿಕ ಘಾಸಿಗೊಂಡಿರುವ ಕೊಡ್ಲಿಪೇಟೆ ಮೂಲದ ಈ ಬಸ್ ಚಾಲಕನ ಚಿಕಿತ್ಸೆಗಾಗಿ ಸರಕಾರ ರೂ. 3 ಲಕ್ಷ ನೆರವು ಕಲ್ಪಿಸಿದ್ದು, ಸೊಂಟ ಹಾಗೂ ತಲೆಭಾಗದ ನರಗಳ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.