ನಾಪೆÇೀಕ್ಲು, ಜೂ. 22: ನಾಪೆÇೀಕ್ಲು ಪಟ್ಟಣದಲ್ಲಿ ನಾಪೆÇೀಕ್ಲು ಹೋಬಳಿ ಬಿಜೆಪಿ ವತಿಯಿಂದ ಚೀನಾ ಸೈನಿಕರಿಂದ ಹುತಾತ್ಮರಾದ ದೇಶದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಚೀನಾದ ವಸ್ತುಗಳನ್ನು ಯಾರೂ ಖರೀದಿಸದಂತೆ ಭಿತ್ತಿ ಪತ್ರಗಳ ಮೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಮುಖಂಡ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಚೀನಾ ಇಡೀ ಪ್ರಪಂಚಕ್ಕೆ ಕೊರೊನಾ ಮಹಾಮಾರಿ ಯನ್ನು ಹಬ್ಬಿಸಿದೆ. ಆ ಸಂದರ್ಭದಲ್ಲಿ ಭಾರತದ ನಡೆಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಬಗ್ಗೆ ಕ್ರೋಧಗೊಂಡ ಚೀನಾ ದೇಶವು ಭಾರತದ ಮೇಲೆ ವಿನಾಃ ಕಾರಣ ದ್ವೇಷ ಸಾಧಿಸುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮಯ್ಯ, ಮತ್ತಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ನಾಪೆÇೀಕ್ಲು ಹೋಬಳಿ ಬಿಜೆಪಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಮುಖಂಡರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೇಟೋಳಿರ ಹರೀಶ್ ಪೂವಯ್ಯ, ಪಾಡಿಯಮ್ಮಂಡ ಮನು ಮಹೇಶ್, ಅರೆಯಡ ಅಶೋಕ್, ಕೇಲೇಟಿರ ದೀಪು ದೇವಯ್ಯ, ಬದ್ದಂಜೆಟ್ಟಿರ ದೇವಿ ದೇವಯ್ಯ, ಕರವಂಡ ಲವ ನಾಣಯ್ಯ, ಎಂ.ಎಂ. ನರೇಂದ್ರ, ಕಂಗಾಂಡ ಜಾಲಿ ಪೂವಪ್ಪ, ಕುಟ್ಟಂಜೆಟ್ಟಿರ ಪೂಣಚ್ಚ, ಶಿವಚಾಳಿ ಯಂಡ ಜಗದೀಶ್, ಮತ್ತಿತರರು ಇದ್ದರು.