ಮಡಿಕೇರಿ, ಜೂ. 21: ಅಮೇರಿಕಾದ ಕ್ಲೈವ್ಲ್ಯಾಂಡ್ನಲ್ಲಿ ವೈದ್ಯರಾಗಿರುವ ಕೊಡಗು ಜಿಲ್ಲೆಯವರಾದ ಮಾತಂಡ ರೀಮಾ ರಮೇಶ್ ಅವರಿಗೆ ಫೆಲೋಶಿಪ್ ದೊರೆತಿದೆ. ವೈದ್ಯಕೀಯ ಶಾಸ್ತ್ರಕ್ಕೊಳಪಟ್ಟ ಪೀಡಿಯಾಟ್ರಿಕ್ ಹೆಮಟಾಲಜಿ ಅಂಕಾಲಜಿ ವಿಷಯದಲ್ಲಿ ವಿಶೇಷ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ಅಲ್ಲಿ ಫೆಲೋಶಿಪ್ ನೀಡಲಾಗಿದೆ.
ಎಂಬಿಬಿಎಸ್ ಎಂಡಿ ಮಾಡಿರುವ ಇವರು ವೀರಾಜಪೇಟೆಯ ವಕೀಲರಾದ ಮಾತಂಡ ಎ. ರಮೇಶ್ ಹಾಗೂ ಬೀನಾ ರಮೇಶ್ (ತಾಮನೆ ಮಚ್ಚಾಮಾಡ) ಅವರ ಪುತ್ರಿ. ಇವರ ಸಹೋದರ ಮಾತಂಡ ಆರ್. ಅಯ್ಯಪ್ಪ ಅವರು ಮೈಸೂರಿನ ಬೃಂದಾವನ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ.
ಡಾ. ರೀಮಾ ಕಡಂಗದ ವಿಜಯಾ ಪ್ರೌಢಶಾಲೆ, ವೀರಾಜಪೇಟೆಯ ಕಾವೇರಿ ಶಾಲೆ ಹಾಗೂ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ್ದರು. ನಂತರ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಹಾಗೂ ಎಂಡಿಇನ್ ಪೀಡಿ ಯಾಟ್ರಿಕ್ಸ್ ಅನ್ನು ಯುಎಸ್ಎಯ ಯೂನಿವರ್ಸಿಟಿ ಆಫ್ ಸದರನ್ ಇಲಿನಾಯ್ಸ್ನಲ್ಲಿ ಪಡೆದಿದ್ದರು. ಇದೀಗ ಇವರ ಸಾಧನೆಗೆ ಫೆಲೋಶಿಪ್ ದೊರೆತಿದೆ.