ಕೂಡಿಗೆ, ಜೂ. 19: ಕೂಡಿಗೆ ಗಾ. ಪಂ.ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರವನ್ನು ಅಲ್ಲಿನ ಗ್ರಾಮಸ್ಥರು ಶುಚಿಗೊಳಿಸಿದರು. ಈ ಹಾಡಿಯ ಕೇಂದ್ರದಲ್ಲಿರುವ 350ಕ್ಕೂ ಹೆಚ್ಚು ಕುಟುಂಬದ ಸದಸ್ಯರು ಅಲ್ಲಿನ ಎಲ್ಲಾ ಬೀದಿಗಳ ಶುಚಿತ್ವಕ್ಕೆ ಒತ್ತು ನೀಡುವ ಮೂಲಕ ಎಲ್ಲರ ಮನೆಯ ಸುತ್ತಲೂ ಬೆಳೆದುನಿಂತಿದ್ದ ಗಿಡಗಂಟಿಗಳನ್ನೂ ಕಡಿದು ಶುಚಿಗೊಳಿಸಿದರು. ಕೇಂದ್ರದ ಪ್ರಮುಖರಾದ ಅಪ್ಪು ಶಂಕರ್, ಮುತ್ತ ರಾಜ, ಕಿರಣ, ಕಿಸನ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.