ಗೋಣಿಕೊಪ್ಪಲು, ಜೂ. 20: ವೀರಾಜಪೇಟೆ ತಾಲೂಕು ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ನೂತನ ಪದಾಧಿಕಾರಿಗಳ ಆಯ್ಕೆ ತಾಲೂಕು ಬಿಜೆಪಿ ಕಚೇರಿ ಆವರಣದಲ್ಲಿ ನಡೆಯಿತು. ನೂತನವಾಗಿ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಸದಸ್ಯರುಗಳ ಪಟ್ಟಿಯನ್ನು ತಾಲೂಕು ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಕೆ. ರಾಜೇಶ್ ಅವರು ಬಿಡುಗಡೆಗೊಳಿಸಿ ಆಯ್ಕೆಯಾದ ಹೆಸರನ್ನು ಘೋಷಿಸಿದರು.

ನೂತನ ಸಮಿತಿಯ ಉಪಾಧ್ಯಕ್ಷರುಗಳಾಗಿ ಕುಂದ ಗ್ರಾಮದ ದಿಲೀಪ್ ಕುಮಾರ್, ವೀರಾಜಪೇಟೆಯ ಎಂ.ಬಿ. ಚಂದ್ರನ್, ಪ್ರಧಾನ ಕಾರ್ಯದರ್ಶಿಗಳಾಗಿ ಹಾಲುಗುಂದ ಗ್ರಾಮದ ಪೊಟ್ಟಂಡ ನವೀನ್ ಉತ್ತಯ್ಯ, ಕಾರ್ಯದರ್ಶಿಗಳಾಗಿ ಕಳತ್ಮಾಡುವಿನ ಬಿ.ಎಸ್. ಸತೀಶ್, ಚನ್ನಯ್ಯನಕೋಟೆಯ ಸಜಿಶ್, ಪಿ.ಎಸ್., ಖಜಾಂಚಿಯಾಗಿ ಅಮ್ಮತ್ತಿಯ ಎನ್.ಎಸ್. ಪ್ರಜೀತ್ ಆಯ್ಕೆಯಾಗಿದ್ದಾರೆ.

ಸದಸ್ಯರುಗಳಾಗಿ ಗೋಣಿಕೊಪ್ಪಲುವಿನ ಜಿ. ವಿವೇಕ್, ಪೆರುಂಬಾಡಿಯ ಬಿ.ಆರ್. ಮನು, ಗೋಣಿಕೊಪ್ಪಲುವಿನ ಎಂ.ಎಂ. ಶ್ರೀನಿ, ಸಿದ್ದಾಪುರದ ಎ.ಸಿ. ಅನೀಲ್, ಹೊಸಕೋಟೆಯ ಕೆ.ಎಂ. ಪ್ರದೀಶ್, ತಿತಿಮತಿಯ ಶೇಖರ್, ಮಾಯಮುಡಿಯ ಬಿ.ಎ. ವಿವೇಕ್, ಪೆಗ್ಗಳದ ಸಿ.ಎಸ್. ಸುದೀರ್, ಕುಟ್ಟದ ರವಿ, ನಾಲ್ಕೇರಿಯ ಅಶ್ವತ್, ಶ್ರೀಮಂಗಲದ ಮುರಳಿ ಮೋಹನ್, ಪಾಲಾಂಗಾಲದ ಬಿ.ಸಿ. ಭರತ್ ಕುಮಾರ್, ಕಾಕೂರುವಿನ ಬಿ.ಹೆಚ್. ಉಮೇಶ್ (ಡಾಲಿ), ಪೊನ್ನಂಪೇಟೆಯ ವಿಜಯ, ಇವರುಗಳನ್ನು ಆಯ್ಕೆ ಮಾಡಲಾಗಿದೆ.