ಮಡಿಕೇರಿ, ಜೂ. 20: ಮಂಗಳೂರು ರಸ್ತೆಯಲ್ಲಿ ಬಿದ್ದು ಸಿಕ್ಕಿದ ನಗದು ಹಣವಿದ್ದ ಪರ್ಸ್‍ವೊಂದನ್ನು ಶಕ್ತಿ ಪತ್ರಿಕಾಲಯಕ್ಕೆ ತಲುಪಿಸುವ ಮೂಲಕ ಕಳೆದುಕೊಂಡಿದ್ದ ವ್ಯಕ್ತಿ ಹೊಂದಿಕೊಳ್ಳುವಲ್ಲಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದ ಆಟೋ ಚಾಲಕ ಬಿ.ಎಸ್. ರಾಮಕೃಷ್ಣ ನಿನ್ನೆ ಬೆಳಿಗ್ಗೆ ಮಂಗಳೂರು ರಸ್ತೆಯಲ್ಲಿ ಬರುತ್ತಿದ್ದಾಗ ರೂ. 6 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವಿದ್ದು, ಇತರ ದಾಖಲೆಗಳ ಸಹಿತ ಪರ್ಸ್ ಕಣ್ಣಿಗೆ ಬಿದ್ದಿದೆ.
ಈ ಪರ್ಸನ್ನು ಅವರು ‘ಶಕ್ತಿ’ಗೆ ತಲುಪಿಸಿದ್ದು, ಇಂದು ‘ಶಕ್ತಿ’ಯ ಉಚಿತ ಜಾಹೀರಾತು ವಿಭಾಗದಲ್ಲಿ ಪರ್ಸ್ ಕಳೆದುಕೊಂಡಿದ್ದ ಕುರಿತು ಪ್ರಕಟಣೆ ಕಣ್ಣಿಗೆ ಬಿದ್ದಿದೆ. ಸ್ವತಃ ಈ ಆಟೋ ಚಾಲಕನೇ ಜಾಹೀರಾತನ್ನು ಶಕ್ತಿ ಪತ್ರಿಕೆಯಲ್ಲಿ ಗಮನಿಸಿ, ಕಳೆದುಕೊಂಡಿದ್ದ ಸುರೇಶ್ ಆಚಾರ್ಯ ಅವರನ್ನು ಸಂಪರ್ಕಿಸಿ ಪತ್ರಿಕಾಲಯದ ಮುಖಾಂತರ ಅದನ್ನು ಹಿಂತಿರುಗಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.