ಮಡಿಕೇರಿ, ಜೂ. 19: ಲಾಕ್ಡೌನ್ ಪ್ರಾರಂಭವಾದಾಗಿಂದಲೂ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ನಗರದ ಮಾರುಕಟ್ಟೆಯ ಕಟ್ಟಡದಲ್ಲಿ ಸಂತೆ ನಡೆಸುವುದು ನಿಷೇಧಿಸಲಾಗಿದೆ.
ಲಾಕ್ಡೌನ್ ಹಂತಗಳಲ್ಲಿ ಸಡಿಲಗೊಳ್ಳುತ್ತಾ ಬಂದಿದ್ದು, ಪ್ರವಾಸೋದ್ಯಮಕ್ಕೂ ಅನುಮತಿ ದೊರೆತಿದೆ. ಆದರೆ ಮಾರುಕಟ್ಟೆ ಕಟ್ಟಡದಲ್ಲಿ ಇನ್ನೂ ಕೂಡ ಸಂತೆ ನಡೆಸಲು ಅನುಮತಿ ದೊರೆತಿಲ್ಲ. ಪರಿಣಾಮ, ಕಟ್ಟಡದ ಸಮೀಪದಲ್ಲಿಯೇ ರಸ್ತೆ ಬದಿಯಲ್ಲೇ ಹೊರ ಊರಿನವರು ಸೇರಿದಂತೆ ಹಲವಾರು ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದಾರೆ. ಮಳೆಗಾಲ ಪ್ರಾರಂಭವಾದ ಕಾರಣ ಕೆಸರುಮಯ ರಸ್ತೆಗಳಲ್ಲಿಯೇ ವ್ಯಾಪಾರ ನಡೆಸುತ್ತಿರುವ ದೃಶ್ಯ ಇಂದು ಕಂಡು ಬಂತು. ಇಂದು ಮಳೆ ಇಲ್ಲದ ಕಾರಣ ಹೆಚ್ಚಿನ ತೊಂದರೆಯಾಗಿಲ್ಲವಾದರೂ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾದಾಗ ಕಟ್ಟಡದ ಒಳಗೆ ಸಂತೆ ನಡೆಸಲು ಅವಕಾಶ ದೊರೆತರೆ ಒಳಿತು.