ಸೋಮವಾರಪೇಟೆ, ಜೂ. 19: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಕೊಠಡಿಯ ಹೆಂಚು ತೆಗೆದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಲಾಕ್‍ಡೌನ್ ಸಂದರ್ಭವೇ ಕೊಠಡಿಯ ಹೆಂಚನ್ನು ತೆಗೆದು ಒಳಗೆ ಇಳಿಯಲು ಯತ್ನಿಸಿರುವ ಕಳ್ಳರು, ಕೊನೆಗೆ ಹೆಂಚನ್ನು ಹಾಗೆಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಿನ್ನೆ ದಿನ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಮಧ್ಯೆ ಹೆಂಚು ತೆಗೆದಿರುವ ಸ್ಥಳದಲ್ಲಿ ಪರ್ಸ್ ಬಿದ್ದು ಸಿಕ್ಕಿದ್ದು, ಅದರಲ್ಲಿ ಈರ್ವರ ಫೋಟೋ ಕಂಡುಬಂದಿದೆ. ಕಾಲೇಜು ಆವರಣದಲ್ಲಿ ಸಿಕ್ಕ ಪರ್ಸ್‍ನ್ನು ಪೊಲೀಸರಿಗೆ ನೀಡಲಾಗಿದ್ದು, ಅದರ ಮಾಲೀಕರ ಪತ್ತೆಗೆ ಪೊಲೀಸರು ಕ್ರಮವಹಿಸಿದ್ದಾರೆ.