ಗೋಣಿಕೊಪ್ಪ ವರದಿ, ಜೂ. 19: ಬೆಸ್ಟೀಸ್ ಗ್ರೂಪ್ ಆಯೋಜಿಸಿದ್ದ ವೀರಾಜಪೇಟೆ ಸ್ಟಾರ್ ಸಿಂಗರ್ ಆನ್‍ಲೈನ್ ಸ್ಪರ್ಧೆಯಲ್ಲಿ ನಾಲ್ವರು ವಿಜೇತರನ್ನು ಆಯೋಜಕರು ಘೋಷಣೆ ಮಾಡಿದ್ದಾರೆ.

ತಿತಿಮತಿ ಗ್ರಾಮದ ಕೆ. ಆರ್. ಹೇಮಾ ಪ್ರಥಮ, ವೀರಾಜಪೇಟೆಯ ಕೆ. ಪಿ. ಶ್ರಾವ್ಯ ದ್ವಿತೀಯ, ಬೆಕ್ಕೆಸೊಡ್ಲೂರು ಗ್ರಾಮದ ಪುತ್ತಾಮನೆ ವಿದ್ಯಾ ಜಗದೀಶ್ ಮತ್ತು ವೀರಾಜಪೇಟೆಯ ಪ್ರಿನ್ಸ್ ವರ್ಗಿಸ್ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ವೀರಾಜಪೇಟೆಯ ಬೆಸ್ಟೀಸ್ ಗ್ರೂಪ್ ಆಯೋಜಿಸಲು ಮುಂದಾಗಿದ್ದ ಸ್ಪರ್ಧೆಯನ್ನು ಲಾಕ್‍ಡೌನ್ ಹಿನ್ನೆಲೆಯಿಂದಾಗಿ ಆನ್‍ಲೈನ್ ಮೂಲಕ ನಡೆಸಿ ವಿಜೇತರನ್ನು ಗುರುವಾರ ಘೋಷಿಸಿದೆ.