ಮಡಿಕೇರಿ, ಜೂ. 19: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ. ಸೀನಿಯರ್ ರೋವರ್‍ಮೆಟ್ ಅಲ್ಲಂಗಡ ರೋಷನ್ ತಮ್ಮಯ್ಯ ತಾ.20 ರಂದು (ಇಂದು) ಮೈಸೂರಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ “ಮಾನವ ಮತ್ತು ವನ್ಯಜೀವಿ ಸಂಘರ್ಷ ಪರಿಹಾರ” ಎಂಬ ವಿಚಾರ ಮಂಡನೆಗೆ ಆಯ್ಕೆಯಾಗಿದ್ದಾನೆÉ.
ಈತ ಕೊಡಗಿನಲ್ಲಿ “ಆನೆ ಮತ್ತು ಮಾನವ ಸಂಘರ್ಷ” ಎಂಬ ವಿಷಯದಲ್ಲಿ ವಿಚಾರ ಮಂಡನೆ ಮಾಡಲಿದ್ದಾನೆ.