ಶನಿವಾರಸಂತೆ, ಜೂ. 20: ಶನಿವಾರಸಂತೆ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ನಡೆಯುವ ಸಂಜೆ ಲಾಕ್‍ಡೌನ್‍ನಿಂದ ರದ್ದಾಗಿದ್ದು, ತಾ. 20 ರಂದು ಸಂತೆಯ ಮಾರುಕಟ್ಟೆಯ ಒಳ ಭಾಗದಲ್ಲಿ ಅಂತರ ಕಾಯ್ದುಕೊಂಡು ವ್ಯಾಪಾರ ನಡೆದಿದೆ. ಸಂತೆ ಮಾರುಕಟ್ಟೆಯೊಳಗಡೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯಚಾರ್, ಬಿಲ್‍ಕಲೆಕ್ಟರ್ ವಸಂತ್, ಸಿಬ್ಬಂದಿ ಧರ್ಮಪ್ಪ ಭೇಟಿ ನೀಡಿ ಪರಿಶೀಲಿಸಿದರು.