ಸಿದ್ದಾಪುರ, ಜೂ. 19: ಮನೆಯ ಮಲಗುವ ಕೋಣೆಯಲ್ಲಿ ಮಲಗಿದ್ದ ಹಾವುಗಳನ್ನು ಸೆರೆ ಹಿಡಿಯುವಲ್ಲಿ ಉರಗ ಪ್ರೇಮಿ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಸಮೀಪದ ಚಂದ್ರಶೇಖರ ಎಂಬವರ ಮನೆಯ ಮಲಗುವ ಕೋಣೆಯ ಮಂಚದ ಮೇಲೆ 4 ಹಾವುಗಳ ದೊಡ್ಡ ಮರಿಗಳು ಮಲಗಿರುವ ಬಗ್ಗೆ ಮನೆಯ ಮಾಲೀಕರು ಉರಗ ಪ್ರೇಮಿ ಸುರೇಶ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸುರೇಶ್ ಈ ಹಾವುಗಳನ್ನು ಸೆರೆ ಹಿಡಿದು ಸಮೀಪದ ಅರಣ್ಯಕ್ಕೆ ಬಿಟ್ಟರು. -ವಾಸು