ಕೂಡಿಗೆ, ಜೂ. 19: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪದ ವಾರ್ಡ್ನ ರಸ್ತೆಗೆ ಸಾರ್ವಜನಿಕರು ಡಾ. ಸರ್ ಎಂ. ವಿಶ್ವೇಶ್ವರಯ್ಯ ರಸ್ತೆ ಎಂಬ ನಾಮಫಲಕವನ್ನು ವಾರ್ಡ್ನ ಮುಖ್ಯ ದ್ವಾರಕ್ಕೆ ಅಳವಡಿಸಿದ್ದಾರೆ.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ, ಬಸವೇಶ್ವರ ದಂಡಿನಮ್ಮ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ಕೆ.ಪಿ. ಸೋಮಣ್ಣ, ಕೂಡಿಗೆ ಪದವಿಪೂರ್ವ ಕಾಲೇಜಿನ ನಿರ್ದೇಶಕ ಮಹೇಶ್, ಪ್ರಮುಖರಾದ ತುಳಸಿ, ಹುಸೇನ್, ಕೃಷ್ಣ ಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.